ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಲಿಂಗಾಯತ ಪ್ರಬಲ ನಾಯಕ ಹಾಗೂ ಸಚಿವ ವಿ ಸೋಮಣ್ಣ ಸ್ಪರ್ದೆ ಮಾಡುತ್ತಿದ್ದು ವರುಣ ಚುನಾವಣಾ ಕಣ ಇದೀಗ ರಣಕಣವಾಗಿ ಮಾರ್ಪಟ್ಟಿದೆ.

ಕಳೆದ ಬಾರಿ ಯಾತಿಂದ್ರ ವಿರುದ್ಧ ವಿಜಯೇಂದ್ರ ಸ್ಪರ್ದೆ ಮಾಡುತ್ತಾರೆ ಎಂದು ಜನರು ಭಾವಿಸಿದ್ದರು. ಕೊನೆಯ ಕ್ಷದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿತ್ತು ಇದರಿಂದ ವರುಣದಲ್ಲಿ ಬಿಜೆಪಿಯಿಂದ ಬಸವರಾಜು ಸ್ಪರ್ದೆ ಮಾಡಿ ಸೋತ್ತಿದ್ದರು.

ಈ ಬಾರಿ ಸಿದ್ದರಾಮಯ್ಯ ವರುಣದಲ್ಲಿ ನಿಲ್ಲುತ್ತಿದ್ದು ಅವರನ್ನು ಕಟ್ಟಿ ಹಾಕಲೇ ಬೇಕು ಎಂದು ಬಿಜೆಪಿ ಪ್ಲಾನ್ ಮಾಡಿದ್ದು ಪ್ರಭಾವಿ ನಾಯಕ ವಿ. ಸೋಮಣ್ಣರನ್ನು ಕಣಕ್ಕಿಲಿಸಿದೆ. ಚಾಮರಾಜನಗರ ಹಾಗೂ ವರುಣ ಎರಡು ಸೋಮಣ್ಣ ಸೋಮಣ್ಣ ಸ್ಪರ್ಧೆ ಮಾಡಲಿದ್ದು ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.
ಏನಿದು ಬಿಜೆಪಿಯ ಒಳ ಲೆಕ್ಕಾಚಾರ ?
ಬಿಜೆಪಿ ವರುಣದಲ್ಲಿ ಗೆಲ್ಲುವುದಕ್ಕಿಂತ ಅನೇಕ ಬೇರೆ ಲೆಕ್ಕಾಚಾರವನ್ನು ಹೊಂದಿದೆ ಎನ್ನಲಾಗಿದೆ. ಸೋಮಣ್ಣ ಸ್ಪರ್ಧೆಯಿಂದ ಸಿದ್ದರಾಮಯ್ಯ ಕ್ಷೇತ್ರದಲ್ಲೆ ಹೆಚ್ಚಿನ ಸಮಯ ಕಳೆಯ ಬಹುದು. ಆ ಮೂಲಕ ಬೇರೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಓಡಾಟ ಮಾಡದಂತೆ ತಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜಿಪಿಯಿದೆ.

ವರುಣದಲ್ಲಿ 55 ಕ್ಕೂ ಹೆಚ್ಚು ಲಿಂಗಾಯತ ಮತಗಳಿದ್ದು ಸೋಮಣ್ಣ ಸ್ಪರ್ಧೆಯಿಂದ ಲಿಂಗಾಯತ ಮತಗಳನ್ನು ಒಟ್ಟುಗೂಡಿಸಿ, ಗೌಡ ಎಸ್ಟಿ,ಎಸ್ಸಿ, ಇತರ ಸಮುದಾಯಗಳನ್ನು ತನ್ನತ್ತ ಸೋಮಣ್ಣ ತೆಗೆದುಕೊಂಡು ಗೆಲುವು ದಕ್ಕಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹೈ ಕಮಾಂಡ್ ಮಾಡಿದೆ ಎಂದು ತಿಳಿದು ಬಂದಿದೆ.