– ಅಮುಲ್ ನಂದಿನಿ ವಿಲೀನ ವಿಚಾರ
– ಸಿದ್ದು ವಿರುದ್ಧ ಸಿಂಹ ವಾಗ್ದಾಳಿ
ಮೈಸೂರು : ನಂದಿನಿ ಅಮುಲ್ ವಿಲೀನ ವಿಚಾರವಾಗಿ
ಕಾಂಗ್ರೆಸ್ ಜೆಡಿಎಸ್ ನವರು ಬಿಜೆಪಿ ವಿರುದ್ಧ ಮುಗಿ ಬೀಳುತ್ತಿದ್ದಾರೆ ಅ ರೀತಿಯ ಯಾವುದೇ ನಿರ್ಧಾರ ನಮ್ಮ ಮುಂದೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಈ ಹಿಂದೆ ಹೇರಿಕೆ ಅಂತ ಹೇಳ್ತಿದ್ರು, ಈಗ ಅಮುಲ್ ಅಂತ ಹೇಳ್ತಿದ್ದಾರೆ.ನಮ್ಮ ನಂದಿನಿ 7ರಾಜ್ಯಗಳಲ್ಲಿ ಮಾರಾಟವಾಗುತ್ತಿದೆ ಹಾಲಿಗೆ ಪ್ರೋತ್ಸಾಹ ಧನ ನೀಡಿದ್ದು ಯಡಿಯೂರಪ್ಪನವರು ಹಾಲು ಕೊಡುವ ಹಸು ರಕ್ಷಣೆಗೆ ನಿಂತವರು ನಾವು ಎಂದು ಸಿಂಹ ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ನಮ್ಮ ಸರ್ಕಾರ ಹಾಲು ಮಾರಾಟಗಾರರು,ರೈತರ ಪರವಾಗಿ ಇದ್ದೇವೆ ನೀವೇಷ್ಟೆ ಅಪಪ್ರಚಾರ ನಡೆಸಿದರು ಅದು ನಡೆಯಲ್ಲ, ನಮ್ಮ ನಂದಿನಿ ಮುಂದೆ ಯಾವುದೇ ಕಂಪನಿಗಳು ಪೈಪೋಟಿ ನೀಡಲು ಸಾಧ್ಯವಿಲ್ಲ. ಈ ರೀತಿಯ ಅಪಪ್ರಚಾರ ಸಲ್ಲದು ಎಂದು ಕಿಡಿಕಾರದರು.
– ಮೋದಿ ಬಂಡೀಪುರ ಬೇಟಿ ವೇಳೆ ಹುಲಿ ಕಾಣದ ವಿಚಾರ
ನಮ್ಮ ಗುಜರಾತಿನ ಸಿಂಹ ಕರ್ನಾಟಕಕ್ಕೆ ಬಂದ್ರೆ ನಿಮಗ್ಯಾಕೆ ಭಯ, ಸಫಾರಿ ವೇಳೆ ಹುಲಿ ಸಿಕ್ಕಿಲ್ಲ, ಇತರೆ ಪ್ರಣಿಗಳುನ್ನು ಮೋದಿ ನೋಡಿದ್ದಾರೆ. ಪ್ರಾಣಿಗಳ ಉಳಿವಿಗಾಗಿ ಮೋದಿ ಬಂಡೀಪುರಕ್ಕೆ ಬಂದು ಹೋಗಿದ್ದಾರೆ. ನೀವು ವಾರಕೊಮ್ಮೆ ಮೈಸೂರಿಗೆ ಬಂದು ಕುರಿ ಚರ್ಬಿ ತಿನ್ನುತ್ತಿರಾ ಮುಖ್ಯಮಂತ್ರಿಯಾಗಿದ್ದಾಗ ಎಸ್ಟು ಬಾರಿ ಬಂಡೀಪುರ ನಾಗರಹೊಳೆಗೆ ಬೇಟಿ ನೀಡಿದ್ದೀರಿ ಹೇಳಿ ಎಂದು ಎಂದು ಪ್ರಶ್ನೆ ಮಾಡಿದರು.