ಮೈಸೂರು : ದೇಶದಿಂದ ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುವುದಕ್ಕೆ ಸಂಪೂರ್ಣವಾಗಿ ನಿಷೇಧ ಹೇರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವ್ರು ನನಗೆ ಸ್ವಂತ ಮನೆಯಿಲ್ಲ, ಬ್ಯಾಂಕ್ ಅಕೌಂಟ್ ಇಲ್ಲ.
ನನ್ನ ಬಳಿ ಹಣವಿಲ್ಲ, ನಾನು ಭಿಕ್ಷೆ ಬೇಡುತ್ತಿದ್ದೇನೆ.
ನನ್ನ ಬಳಿ ಒಂದಷ್ಟು ಬಟ್ಟೆಗಳಿವೆ ಅಷ್ಟೇ ಹೆಂಡತಿ ಮಕ್ಕಳು ಯಾರು ಇಲ್ಲ.ನನಗೆ ಹಣ ಆಸ್ತಿ ಮಾಡುವ ಉದ್ದೇಶವಿಲ್ಲ ಎಂದು ತಿಳಿಸಿದರು.
ನಾನು ಹಿಂದುತ್ವ, ಹಿಂದುಗಳ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇನೆ. ಕಾರ್ಕಳದಿಂದ ಚುನಾವಣೆಗೆ ನಿಂತಿದ್ದೇನೆ ಒಂದು ಓಟು ಕೊಡಿ ನೂರು ರೂಪಾಯಿ ಕೊಡಿ ಎಂದು ಜನರಲ್ಲಿ ಕೇಳುತ್ತಿದ್ದೇನೆ ಎಂದರು. ನಾನು ಹೋದಲ್ಲೆಲ್ಲಾ ನೂರು ರೂಪಾಯಿ ನೋಟು ಕೊಡುತ್ತಿರುವ ಜನರು ಓಟು ನೀಡುವುದು ಖಚಿತ, ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳು ನನಗೆ ಎದುರಾಳಿಗಳಾಗಿವೆ.ಆದರೂ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಡಿಸಿದರು.