ಮೈಸೂರು: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಮೈಸೂರು ಪ್ರವಾಸವನ್ನು ಇದೇ ತಿಂಗಳ ಏಪ್ರಿಲ್ 8 ಹಾಗೂ 9 ರಂದು ಕೈಕೊಂಡಿದ್ದಾರೆ.

ಹುಲಿ ಸಂರಕ್ಷಣಾ ಯೋಜನೆ 50 ವರ್ಷ ಹಿನ್ನೆಲೆಯಲ್ಲಿ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಮೋದಿ ಆಗಮಿಸಲಿದ್ದಾರೆ. ಏಪ್ರಿಲ್ 8 ರ ಸಂಜೆ 8 ಗಂಟೆಗೆ ಮೈಸೂರಿಗೆ ಆಗಮಿಸಿ ರ‌್ಯಾಡಿಷನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 9 ಬೆಳಿಗ್ಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡಿಪುರಕ್ಕೆ ಪಯಣ, ಬೆಳಿಗ್ಗೆ 7.30 ರ ಸುಮಾರಿಗೆ ಬಂಡೀಪುರಕ್ಕೆ ಭೇಟಿ,ಸಫಾರಿಯನ್ನು ಕೈಗೊಳ್ಳಲಿದ್ದಾರೆ. 10 ಗಂಟೆ ಸುಮಾರಿಗೆ ನೀಲಗಿರೀಸ್‌ಗೆ ಭೇಟಿ ಕೊಟ್ಟು ನಂತರ 10.30ಕ್ಕೆ ಮೈಸೂರಿಗೆ ವಾಪಸ್ ಆಗಲಿದ್ದಾರೆ. ಬಳಿಕ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮಿಸಿ 11 ಗಂಟೆಗೆ ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದ ಬಳಿಕ ಸುಮಾರು 12..30ಕ್ಕೆ ಮೋದಿ ದೆಹಲಿಗೆ ವಾಪಸ್ ಆಗಲಿದ್ದಾರೆ.