ಮೈಸೂರು : ಸೆರೆಯಾದ ಚಿರತೆ ಜೊತೆ ಸೆಲ್ಫಿಗೆ ಯತ್ನ.
ಯುವಕನ ಮೇಲೆ ಚಿರತೆ ದಾಳಿ
ಪಾಳು ಮನೆಯಲ್ಲಿ ಅಡಗಿದ್ದ ಚಿರತೆ ಸೆರೆಹಿಡಿದಿದ್ದ ಅರಣ್ಯಾಧಿಕಾರಿಗಳು. ಸೆರೆಯಾದ ಚಿರತೆ ಜೊತೆ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ ಯುವಕ.
ಯುವಕನ ಮೇಲೆ ದಾಳಿ ನಡೆಸಿದ ಚಿರತೆ.
ಚಿರತೆ ದಾಳಿಯಿಂದ ಗಾಯಗೊಂಡ ಯುವಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು.
ನಂಜನಗೂಡು ತಾಲ್ಲೂಕಿನ ಯಾಲಹಳ್ಳಿ ಗ್ರಾಮದಲ್ಲಿ ಘಟನೆ.ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿದ್ದ ಚಿರತೆ.
ಮಹದೇವಪ್ಪ ಎಂಬುವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಅಡಗಿತ್ತು.ಹೊರ ಬರಲು ಸಾಧ್ಯವಾಗದಂತೆ ಸಂಪೂರ್ಣವಾಗಿ ಪಾಳು ಮನೆಯಲ್ಲಿ ಕೂಡಿ ಹಾಕಿದ್ದ ಗ್ರಾಮಸ್ಥರು.ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಗ್ರಾಮದ ಜನ.ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್, ಜನಾರ್ಧನ್ ತಂಡ.ಸುಮಾರು ನಾಲ್ಕು ಗಂಟೆಗಳ ಕಾಲ ಚಿರತೆ ಸೆರೆಗೆ ಕಾರ್ಯಾಚರಣೆ.ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿ.ಸೆರೆಯಾದ ಚಿರತೆ ಬಳಿ ಬಂದ ಸ್ಥಳೀಯ ಯುವಕ ಜಯಶಂಕರ್.ಚಿರತೆ ಜೊತೆ ಸೆಲ್ಫೀ ತೆಗೆಯಲು ಯತ್ನಿಸಿದ ಜಯಶಂಕರ್.ಈ ವೇಳೆ ಜಯಶಂಕರ್ ಮೇಲೆ ಚಿರತೆ ದಾಳಿ.ಸೆರೆಯಾದ ಚಿರತೆ ಅರಣ್ಯ ಪ್ರದೇಶಕ್ಕೆ ರವಾನೆ.