ಮೈಸೂರು : ಮುಸುಕುದಾರಿಗಳಿಂದ ದರೋಡೆಗೆ ಯತ್ನ ಪ್ರಕರಣ.ವರದಿಯಿಂದ ಎಚ್ಚೆತ್ತ ಶಾಸಕ ದರ್ಶನ್ ಧ್ರುವನಾರಾಯಣ್.ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಶಾಸಕ.
ನಂಜನಗೂಡಿನಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ಯತ್ನಿಸಿದ್ದ ಮುಸುಕುದಾರಿಗಳು.
ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣ.ಈ ಬಗ್ಗೆ ಮಾಧ್ಯಮ ವರದಿ ಪ್ರಸಾರ ಮಾಡಿತ್ತು.
ವರದಿಯಿಂದ ಎಚ್ಚೆತ್ತ ಶಾಸಕ ದರ್ಶನ್ ಧ್ರುವನಾರಾಯಣ್, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ.ನಂಜನಗೂಡಿನ ತಾಲ್ಲೂಕು ಆಡಳಿತ ಭವನದಲ್ಲಿ ತುರ್ತು ಸಭೆ
ಸಭೆಯಲ್ಲಿ ಸಾರ್ವಜನಿಕರಲ್ಲಿ ಮೂಡಿರುವ ಆತಂಕ ನಿವಾರಣೆಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಖಡಕ್ ಸೂಚನೆ.
ಮೂರು ದಿನಗಳ ಹಿಂದೆ ಇಬ್ಬರು ಖದೀಮರು ಮುಸುಕು ಧರಿಸಿ ಮಾರಕಾಸ್ತ್ರ ಹಿಡಿದರಾಜಾರೋಷವಾಗಿ ಓಡಾಡಿ ದರೋಡೆಗೆ ಯತ್ನಿಸಿದ್ದರು.
ಒಂದು ಮನೆಗೆ ನುಗ್ಗಿ ಬರಿಗೈಲಿ ಹಿಂದಿರುಗಿದ್ದರು.
ಈ ದೃಶ್ಯಗಳು ಸಿಸಿ ಕ್ಯಾಮರಾಲ್ಲಿ ಸೆರೆಯಾಗಿತ್ತು.
ಸುದ್ದಿಯನ್ನು ಪ್ರಸಾರ ಮಾಡಿ ನಂಜನಗೂಡು ಪೊಲೀಸರ ನಿರ್ಲಕ್ಷ್ಯ ಕಾರ್ಯವೈಖರಿಯನ್ನು ಪ್ರಶ್ನಿಸಲಾಗಿತ್ತು.
ಈ ಹಿನ್ನಲೆ ಎಚ್ಚೆತ್ತುಕೊಂಡ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ.
ನಂಜನಗೂಡು ಡಿವೈಎಸ್ಪಿ ರಘು, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸೇರಿದಂತೆ ತಾಲ್ಲೂಕಿನ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಪ್ರಮುಖವಾಗಿ ದರೋಡೆಗೆ ಸಂಚು ರೂಪಿಸಿ ಆತಂಕ ಸೃಷ್ಟಿಸಿರುವ ಖದೀಮರ ಬಗ್ಗೆ ಚರ್ಚಿಸಿದ್ದಾರೆ.
ಪಟ್ಟಣ ಮತ್ತು ಗ್ರಾಮೀಣಾ ಪ್ರದೇಶದಲ್ಲಿ ರಾತ್ರಿ ಪಾಳಿಯದಲ್ಲಿ ಗಸ್ತು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರು ಆತಂಕ ಪಡುವುದು ಬೇಡ. ತಾಲ್ಲೂಕು ಆಡಳಿತ ಸುಭದ್ರವಾಗಿದೆ. ಸಾರ್ವಜನಿಕರಿಗೆ ವಿಶ್ವಾಸ ಮೂಡುವ ದಿಕ್ಕಿನಲ್ಲಿ ಭದ್ರತೆ ಒದಗಿಸಲಾಗುತ್ತದೆ ಎಂದು ಅಭಯ ನೀಡಿದ್ದಾರೆ.ಗ್ರಾಮಾಂತರ ಠಾಣೆಗಳು ಹಾಗೂ ಹುಲ್ಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕ್ರೈಂ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಶಾಸಕರು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾರೆ.