ಮೈಸೂರು :ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಧನಂಜಯಸರ್ಜಿಗೆ ಭರ್ಜರಿ ಗೆಲುವು.
ಕಾಂಗ್ರೆಸ್ ನ ಆಯನೂರು ಮಂಜುನಾಥ್ ಗೆ ಹೀನಾಯ ಸೋಲು.ಬಿಜೆಪಿಯ ಧನಂಜಯ ಸರ್ಜಿಗೆ 37,627 ಮತಗಳು ಲಭ್ಯ.ಕಾಂಗ್ರೆಸ್ ನ ಆಯನೂರು ಮಂಜುನಾಥ್ ಗೆ 13,516 ಮತಗಳು ಲಭ್ಯ.ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ 7,039 ಮತಗಳು ಲಭ್ಯ.
ಕಾಂಗ್ರೆಸ್ ವಿರುದ್ದ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಗೆ 24,111 ಮತಗಳ ಅಂತರದ ಭರ್ಜರಿ ಗೆಲುವು.
ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಸತತ ಏಳನೇ ಬಾರಿ ಗೆಲುವಿನ ನಗೆ ಬೀರಿದ ಬಿಜೆಪಿ.
ಚಲಾವಣೆಯಾಗಿದ್ದ ಒಟ್ಟು ಮತಗಳು 66497.
ಈ ಪೈಕಿ ಸಿಂಧುವಾದ ಮತಗಳು 61382.
ಕುಲಗೆಟ್ಟ ಮತಗಳು 5115.ಗೆಲುವಿಗಾಗಿ ನಿಗದಿಪಡಿಸಿದ್ದ ಖೋಟಾ ಮತಗಳು 30692.ನಿಗದಿಪಡಿಸಿದ್ದ ಖೋಟಾ ಮತಗಳಿಗಿಂತ ಹೆಚ್ಚಿನ ಪ್ರಮಾಣದ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ ಬಿಜೆಪಿಯ ಧನಂಜಯಸರ್ಜಿ.
ದಕ್ಷಿಣ ಶಿಕ್ಷಕರ ಚುನಾವಣೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಮೊದಲ ಗೆಲವು.
ಮೈತ್ರಿ ಅಭ್ಯರ್ಥಿಗೆ ವಿವೇಕಾನಂದಗೆ 10823 ಮತಗಳು.
ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6201 ಮತಗಳು.
ವಾಟಾಳ್ ನಾಗರಾಜ್ ಗೆ 84 ಮತಗಳು.
4622 ಮತಗಳ ಭಾರಿ ಅಂತರಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು
1049 ಕುಲಗೆಟ್ಟ ಮತಗಳು.