ಮೈಸೂರು : ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ.ಹೊತ್ತಿ ಉರಿದ ಮನೆ,ಬೆಂಕಿಯ ಕೆನ್ನಾಲಿಗೆಗೆ ಮನೆ ಆಹುತಿ.ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಘಟನೆ. ಗ್ರಾಮದ ಶಾರದಮ್ಮಈರಣ್ಣನಾಯಕ ಮತ್ತು ಜವರಮ್ಮ ಎಂಬುವರಿಗೆ ಸೇರಿದ ಮನೆ.
ಸಿಲಿಂಡರ್ ನಿಂದ ಗ್ಯಾಸ್ ವಾಸನೆ ಬರುತ್ತಿತ್ತು.
ಬೆಳಿಗ್ಗೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳಿಗೆ ತೋರಿಸೋಣ ಎಂದು ಮಲಗಿದ್ದಾರೆ.
ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಮನೆ.
ತಕ್ಷಣ ಎಚ್ಚರಗೊಂಡ ಮಲಗಿದ್ದ ಶಾರದ.ಈರಣ್ಣ, ವಂದನಾ. ನವೀನ್ ಎದ್ದು ಮನೆಯಿಂದ ಹೊರಗಡೆ ಬರುವಷ್ಟರಲ್ಲಿ ಮನೆ ತುಂಬಾ ಆವರಿಸಿದ ಬೆಂಕಿ.
ತಕ್ಷಣ ಅಗ್ನಿಶಾಮಕ ದಳ ಕರೆ ಮಾಡಿ ಸುದ್ದಿ ತಿಳಿಸಿದ ಕುಟುಂಬಸ್ಥರು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಬೆಂಕಿ ನಂದಿಸುವಲ್ಲಿ ಯಶಸ್ವಿ.
ಬರುವಷ್ಟರಲ್ಲಿ ಮನೆ ತುಂಬ ವ್ಯಾಪಿಸಿದ ಬೆಂಕಿ.
ಮನೆಯಲ್ಲಿದ್ದ ಗೃಹಬಳಕೆ ಬೆಂಕಿಗಾಹುತಿ.
ಟಿವಿ,ಫ್ರಿಡ್ಜ್ ಮಿಕ್ಸಿ, ಏರ್ ಕೂಲರ್ ಚಿನ್ನ ಬೆಳ್ಳಿ ಸೇರಿದಂತೆ 1ಲಕ್ಷದ 42 ಸಾವಿರ ನಗದು ನಾಶ.
10 ಲಕ್ಷಕ್ಕೂ ಹೆಚ್ಚು ಗೃಹಳಕೆ ವಸ್ತುಗಳು ನಷ್ಟ
ವಾಸ ಮಾಡಲು ಮನೆ ಇಲ್ಲದೆ ಕುಟುಂಬಸ್ಥರು ಕಣ್ಣೀರು
ಸೂಕ್ತ ಪರಿಹಾರ ಕುಟುಂಬಸ್ಥರ ಆಗ್ರಹ.