ಮೈಸೂರು : ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಜನರು ಮತ್ತೊಂದೆಡೆ ನಿಂತ ಚರಂಡಿ ನೀರನ್ನು ಬಕೆಟ್ ನಲ್ಲಿ ತುಂಬಿಸಿ ಕೊಂಡು ಸುರಿಯುತ್ತಿರುವ ದೃಶ್ಯ, ಚರಂಡಿ ಸಮಸ್ಯೆಯಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗ ತಗುಲಬಹುದು ಎಂಬ ಭೀತಿಯಲ್ಲಿ ತಮ್ಮ ಸಂಭಂದಿಗಳ ಮನೆಗೆ ಮಕ್ಕಳನ್ನ ಕಳುಹಿಸಿರುವ ಪೋಷಕರು ಇಷ್ಟೆಲ್ಲಾ ಸಮಸ್ಯೆ ಆಗಿರೋದು ಮೈಸೂರಿನ ಸಮೀಪದ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಡಿ.ಸಾಲುಂಡಿ ಗ್ರಾಮದ ನಾಯಕರ ಹೊಸ ಬಡಾವಣೆಯಲ್ಲಿ .
ಹೌದು ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದಾಗಿ ಗ್ರಾಮದ ಚರಂಡಿಗಳೆಲ್ಲ ಕಲುಶಿತ ನೀರಿನಿಂದ ತುಂಬಿ ಗಬ್ಬೆದ್ದು ನಾರುತ್ತಿದ್ದುಜನರು ಸಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ಕಳೆದ ಕೆಲ ವರ್ಷದಹಿಂದೆ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಿದ್ದು ಚರಂಡಿ ನೀರು ಸರಿಯಾಗಿ ಹರಿಯಲು ಸರಿಯಾದ ವ್ಯವಸ್ಥೆ ಮಾಡದ ಕಾರಣ ಹಾಗೂ ಚರಂಡಿಗೆ ಅಡ್ಡಕಟ್ಟೆ ಹಾಕಿರುವ ಕಾರಣ ಚರಂಡಿಯಲ್ಲಿಯೆ ನೀರು ನಿಂತು ಹತ್ತಾರು ಸಮಸ್ಯೆಗಳಿಗೆ ನಿವಾಸಿಗಳು ತುತ್ತಾಗುತ್ತಿದ್ದಾರೆ.
ಹತ್ತಿರದ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಓರ್ವ ವ್ಯಕ್ತಿ ಸಾವನ್ನಪ್ಪಿ ನೂರಾರು ಮಂದಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಸುದ್ದಿ ಕೇಳಿದಾಗಿನಿಂದ ಈ ಗ್ರಾಮಸ್ಥರಿಗೆ ನಮಗೂ ಆ ರೀತಿಯ ದಿನಗಳು ಬರುವುದಕ್ಕೂ ಮುಂಚೆ ಈ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡಿ ಎಂದು ಸಂಭಂದಪಟ್ಟವರಲ್ಲಿ ಮನವಿ ಮಾಡುತ್ತಿದ್ದಾರೆ.
ಈಗಾಗಲೆ ಚರಂಡಿ ಸಮಸ್ಯೆ ಬಗೆಹರಿಸಿಕೊಳ್ಲಲು ಗ್ರಾಮ ಪಂಚಾಯಿತಿಯಿಂದ ಮುಖ್ಯಮಂತ್ರಿಗಳ ವರೆಗೂ ದೂರು ಕೊಟ್ಟಿರುವ ಈ ಗ್ರಾಮಸ್ಥರಿಗೆ ಸಿಕ್ಕಿರೋದು ಕೇವಲ ಬೊಗಳೆ ಆಶ್ವಾಸನೆ ಅಷ್ಟೆ ಸದ್ಯ ದಯಮಾಡಿ ಈ ಸಮಸ್ಯೆಯಿಂದ ಮುಕ್ತಿ ಕೊಡಿಸಿ ಎಂದು ಪಬ್ಲಿಕ್ ನೆಕ್ಸ್ಟ್ ವಾಹಿನಿಗೆ ಮೊರೆಯಿಟ್ಟಿದ್ದಾರೆ.
ಜೆಡ್ಡು ಸರ್ಕಾರದ ವ್ಯವಸ್ಥೆಗೆ ಮನವಿ ಮಾಡಿ ಬೇಸತ್ತಿರುವ ಜನತೆ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿ ಮುಂದೆ ಉಗ್ರ ಹೋರಾಟಕ್ಕೆ ಸಿದ್ದ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.