ಮೈಸೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ.
ಎಸ್.ಐಟಿ ತನಿಖೆ ಮಾಡುತ್ತಿದೆ. ನಮ್ಮ ಪೋಲಿಸರ ಬಗ್ಗೆ ನಂಬಿಕೆ ಇದೆ.ನಿಕ್ಷಪಕ್ಷಪಾತ ತನಿಖೆ ಮಾಡಿ ವರದಿ ಕೊಡುತ್ತಾರೆ.ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐನ್ನ ಕರಪ್ಸನ್ ಬ್ಯೂರ್ ಆಫ್ ಇನ್ವೇಸ್ಟಿಗೇಶನ್ ಅನ್ನುತ್ತಿದ್ದರು.
ಚೋರ್ ಬಚಾವ್ ಸಂಸ್ಥೆ ಅಂಥ ದೇವೇಗೌಡರು ಹೇಳಿದ್ರು.
ಈಗ ನೋಡಿದ್ರೆ ಸಿಬಿಐಗೆ ಕೊಡಿ ಅನ್ನುತ್ತಿದ್ದಾರೆ, ಇದರ ಅರ್ಥ ಏನು ಎಂದು ಪ್ರಶ್ನೆ ಮಾಡಿದರು.
ನನಗೆ ನಂಬಿಕೆ ಇದೆ ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ. ನಾನು ಯಾವತ್ತು ಪೊಲೀಸರಿಗೆ ಕಾನೂನಿನ ವಿರುದ್ಧವಾಗಿ ತನಿಖೆ ಮಾಡಿ ಅಂಥ ಹೇಳುವುದಿಲ್ಲ.
ಎಸ್ಐಟಿ ಮೇಲೆ ನಂಬಿಕೆ ಇಡಬೇಕು.
ನಮ್ಮ ಪೊಲೀಸ್ ಮೇಲೆ ಅವರಿಗೆ ನಂಬಿಕೆ ಇಲ್ವಾ.
ಈ ಹಿಂದೆ ಸಿಬಿಐಗೆ ನಾವೇ ಸಿಬಿಐಗೆ ಲಾಟರಿ ಕೇಸ್, ಜಾರ್ಜ್ ಕೇಸ್, ಹಾಗು ಡಿ.ಕೆ ರವಿ ಕೇಸ್ ಕೊಟ್ಟಿದ್ದೇವು.
ಆ ಪ್ರಕರಣದಲ್ಲಿ ಯಾರಿಗಾದರೂ ಶಿಕ್ಷೆಯಾಗಿದ್ಯಾ.
ಹಾಗಂತ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಅಂಥ ಅರ್ಥ ಅಲ್ಲ. ಈ ಪ್ರಕರಣದಲ್ಲಿ ನಮ್ಮ ಪೊಲೀಸರೇ ತನಿಖೆ ಮಾಡುತ್ತಾರೆ.ಡಿಸಿಎಂ ಡಿಕೆ.ಶಿವಕುಮಾರ್ ಪಾತ್ರ ಇದೆ ಎಂಬ ಆರೋಪ ವಿಚಾರ. ಪ್ರಕರಣದಲ್ಲಿ ಯಾರ ಇನ್ವಾಲ್ ಮೆಂಟ್ ಇಲ್ಲ, ನನ್ನ ಇನ್ವಾಲ್ ಮೆಂಟ್ ಕೂಡ ಇಲ್ಲ.
ಪೊಲೀಸರ ಮೇಲೆ ವಿಶ್ವಾಸ ಇದೆ. ಸತ್ಯ ಸತ್ಯಾತೆಯನ್ನ ಹೊರಗೆ ಬರುತ್ತದೆ. ಪ್ರಕರಣಕ್ಕೆ ಅಂತರಾಷ್ಟ್ರೀಯ ಸಂಕರ್ಪ ಇದೆ ಎಂಬುದೆಲ್ಲಾ ನಿಜವಲ್ಲ ಎಂದರು.
ಈ ಪ್ರಕರಣವನ್ನ ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ ಅಷ್ಟೇ. ಮಾಜಿ ಸಚಿವ ಎಚ್.ಡಿ ರೇವಣ್ಣ ಬಂಧನ ವಿಚಾರ.ಏನು ಕೇಸ್ ಇಲ್ಲ ಅಂದ ಮೇಲೆ ನಿರೀಕ್ಷಿಣಾ ಜಾಮೀನಿಗೆ ಯಾಕೆ ಅಪ್ಲೈ ಮಾಡಿದ್ರು.
ಇದರಲ್ಲಿ ರಾಜಕೀಯ ಎಲ್ಲಿಂದ ಬಂತು.
ಅಫರಾದ ಆಗಿಲ್ಲ ಅನ್ನೊದಾದರೇ ಜಾಮೀನು ಅರ್ಜಿ ಯಾಕೆ ತಿರಸ್ಕಾರ ಆಗಿದೆ ಎಂದು ಹೇಳಿದರು.