ಮೈಸೂರು : ಮೈಸೂರು ಕೊಡಗು ಲೋಕಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಹಿರಿಯ ಲಿಂಗಾಯತ ಮುಖಂಡ ಗುರುಪಾದಸ್ವಾಮಿ ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಆಪರೇಶನ್ ಹಸ್ತಕ್ಕೆ ಪ್ರತಿಯಾಗಿ ವಿಜಯೇಂದ್ರ ಮತ್ತೊಂದು ಆಪರೇಶನ್ ಮಾಡಿ ಗುರುಪಾದಸ್ವಾಮಿ ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ನಾಳೆ ವಿಜಯೇಂದ್ರ ಮೈಸೂರಿಗೆ ಆಗಮಿಸಲಿದ್ದು ಗುರುಪಾದಸ್ವಾಮಿ ಅವರ ಮನೆಗೆ ಭೇಟಿ ನೀಡಲಿದ್ದಾರೆ. ವಿಜಯೇಂದ್ರ ಭೇಟಿ ಬಳಿಕ 4 ಗಂಟೆಗೆ ಅಧಿಕೃತವಾಗಿ ಗುರುಪಾದಸ್ವಾಮಿ ಬಿಜೆಪಿ ಸೇರಲಿದ್ದಾರೆ.
ಕಾಂಗ್ರೆಸ್ ನಲ್ಲಿ ಲಿಂಗಾಯತರ ಕಡಗಣಗೆ
ಗುರುಪಾದಸ್ವಾಮಿ ಅವರಿಗೆ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡದೆ ಹಾಗೂ ನಿಗಮ ಮಂಡಳಿಯನ್ನು ಕೊಡದೆ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡುತ್ತಿದ್ಯಾ ಎಂಬ ಪ್ರಶ್ನೆ ಇದೀಗ ಮೈಸೂರು ಕೊಡಗು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎದ್ದಿದೆ. ಅಲ್ಲದೆ ಈ ಹಿಂದೆಯೂ ಕೂಡ ಸಿದ್ದರಾಮಯ್ಯ ಭರವಸೆ ನೀಡಿ ಯಾವುದೇ ಸ್ಥಾನಮಾನ ನೀಡದೆ ಹೋದದ್ದು ಗುರುಪಾದಸ್ವಾಮಿ ಬಿಜೆಪಿ ಸೇರಲು ಕಾರಣ ಎಂದು ಹೇಳಲಾಗುತ್ತಿದೆ. ನಿಗಮ ಮಂಡಳಿ ಸ್ಥಾನಮಾನಗಳನ್ನೂ ಬೇಕಾದವರಿಗೆ ಕೊಟ್ಟು ಲಿಂಗಾಯತ ಸಮಾಜಕ್ಕೆ ಮನ್ನಣೆ ನೀಡಿಲ್ಲ ಎಂಬುದು ಅವರ ಆತ್ಮೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.