ಮೈಸೂರು : ಕೇಂದ್ರಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ರಾಜ್ಯಕ್ಕೆ ಆಗಮಿಸಿರುವ. ಅಮಿತ್ ಶಾ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಮಿತ್ ಶಾಗೆ ಕನ್ನಡಿಗರ ಮತ ಕೇಳಲು ಯಾವ ನೈತಿಕತೆಯೂ ಇಲ್ಲ. ಬರಗಾಲದ ಪರಿಹಾರವಾಗಿ 5 ಪೈಸೆಯೂ ನೀಡಿಲ್ಲ. ಅಮಿತ್ ಶಾ ತಮ್ಮ ಮನೆಯಿಂದ ಪರಿಹಾರ ಕೊಡ್ತಾರಾ ಎಂದು ಪ್ರಶ್ನೆ ಮಾಡಿದರು.
ಮೊದಲು ಬರ ಪರಿಹಾರ ನೀಡಿ ನಂತರ ಕರ್ನಾಟಕಕ್ಕೆ ಬರಲಿ. ಕನ್ನಡಿಗರು ಬಿಜೆಪಿಗೆ ಸರಿಯಾಗಿ ಪಾಠ ಕಲಿಸ್ತಾರೆ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ವಕ್ತಾರರ ರೀತಿ ಮಾತನಾಡುತ್ತಿದ್ದಾರೆ. ಪರಿಹಾರ ನೀಡದವರನ್ನ ಹೆಚ್ಡಿಕೆ ಸಮರ್ಥಿಸಿಕೊಳ್ತಾರೆ ಎಂದು ಹರಿಹಾಯ್ದರು.