ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಶಾರದಾದೇವಿನಗರದಲ್ಲಿ ಪಕ್ಷದ ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ ರಾಜ್ಯ ಸಂಚಾಲಕರಾದ ರೂಪ ಅಯ್ಯರ್ ನೇತೃತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಪತ್ರ ಸಲಹಾ ಸಂಗ್ರಹ ಅಭಿಯಾನ ನಡೆಯಿತು. ಸ್ಥಳೀಯ ಮಹಿಳೆಯರು ಹಾಗೂ ಮುಖಂಡರು ಭಾಗವಹಿಸಿ ಅಭಿಪ್ರಾಯ ಪತ್ರ ನೀಡಿದರು.
ಜನರನ್ನು ಉದ್ದೇಶಿಸಿ ಮಾತನಾಡಿದ ರೂಪ ಅಯ್ಯರ್ ರವರು ಲೋಕಸಭಾ ಚುನಾವಣೆ ಗೆಲ್ಲುವ ಗುರಿ ನಮ್ಮ ಮುಂದಿದೆ, ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ವಿಶಾಲ ಮನಸ್ಸಿನಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಬೇಕು, ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿಯಾಗುವುದನ್ನು ನೋಡಲು ನಾವೆಲ್ಲರೂ ಒಂದಾಗಿ ಶ್ರಮಿಸಬೇಕು, ಲೋಕಸಭಾ ಚುನಾವಣೆ ಗೆಲ್ಲುವ ಗುರಿ ನಮ್ಮೆಲ್ಲರ ಮುಂದಿದೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ
ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಮನೆ ಮನೆಗೆ ತೆರಳಿ ಜನರಿಗೆ ತಲುಪಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿ ಎಂದರು.
ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಉಪಾಧ್ಯಕ್ಷರಾದ ಹೆಚ್.ಜಿ ರಾಜಮಣಿ, ಹಿರಿಯಣ್ಣ, ಲಲಿತಾ, ಕಾರ್ಯದರ್ಶಿಗಳಾದ ವಿನುತಾ, ತುಳಸಿ, ಮಹಿಳಾ ಮುಖ್ಯ ಅಧ್ಯಕ್ಷರಾದ ಲಕ್ಷ್ಮೀ ಜಯಶಂಕರ್, ರವಿ ಅರಸ್, ಹೇಮಲತಾ, ಅನಿತಾ, ಸುಮಾ ಸೇರಿದಂತೆ ಸ್ಥಳೀಯರು ಭಾಗವಹಿಸಿ ವಿಕಸಿತ ಭಾರತ ಸಂಕಲ್ಪ ಪತ್ರದ ಮುಖೇನ ಅಭಿಪ್ರಾಯ ದಾಖಲಿಸಿದರು.