ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿಟಿ ರವಿ ಅವರಿಗೆ ಟಿಕೆಟ್ ಕೈತಪ್ಪಿದ್ದು, ಆದರೂ ಸಹ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ನಾಣು ಸಿದ್ದಾಂತ ಬದ್ದ ರಾಜಕಾರಣ ಮಾಡಿದ್ದೇನೆ. ಅದು ಕೆಲವರಿಗೆ ದೌರ್ಬಲ್ಯ ಅನ್ನಿಸಿರಬಹುದು . ಯಾರಿಗೆ ಟಿಕೆಟ್ ಕೊಟ್ಟರೂ ಪ್ರಧಾನಿ ಮೋದಿ ನೋಡಿ ಕೆಲಸ ಮಾಡ್ತೇವೆ. ಮೋದಿಯೇ ನಮ್ಮ ಅಭ್ಯರ್ಥಿ ಎಂದು ಕೆಲಸ ಮಾಡುತ್ತೇವೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಕೆಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಕೆಎಸ್ ಈಶ್ವರಪ್ಪ ಜೊತೆ ಹೈಕಮಾಂಡ್ ನಾಯಕರು ಮಾತನಾಡುತ್ತಾರೆ. ಕೆ.ಎಸ್ ಈಶ್ವರಪ್ಪ ನಿರ್ಧಾರದಿಂದ ಪಕ್ಷಕ್ಕೆ ಮಾರಕ ಆಗಬಾರದು. 3 ಬಾರಿ ಅಧ್ಯಕ್ಷ ಡಿಸಿಎಂ ಆಗಿ ಈಶ್ವರಪ್ಪಕೆಲಸ ಮಾಡಿದ್ದಾರೆ ಈಶ್ವರಪ್ಪಗೆ ವಿನಂತಿ ಮಾಡುತ್ತೇನೆ. ನಿಮ್ಮ ನಿರ್ಣಯ ಪಕ್ಷ ದೇಶಕ್ಕೆ ಹಿತವಾಗಬೇಕು. ತಮ್ಮ ನಿರ್ಧಾರವನ್ನ ಮರುಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.