ಶಿವಮೊಗ್ಗ : ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ಸೇರಿ ನನಗೆ ನನ್ನ ಮಗನಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕೆಂಡವಾಗಿದ್ದಾರೆ.
ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರಗೆ ಪ್ರಾಮುಖ್ಯತೆ ಕೊಡ್ತಾರೆ. ಆದರೆ ಇವರು ಇದನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ವರಿಷ್ಠರು ನನಗೆ ಹೇಳಿದ ತಕ್ಷಣ ನಾನು ನಿವೃತ್ತಿ ಘೋಷಿಸಿದೆ. ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ ಚರ್ಚೆ ಮಾಡೋಣ ಸಂಜೆಯೇ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು
ಕ್ಷೇತ್ರದ ಜನರು ನನ್ನ 5 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ನನಗೆ ಯಾವುದೇ ತೊಂದರೆ ಇಲ್ಲ. ಇದೇ ಬಿಎಸ್ ವೈ ನನಗೆ ಭರವಸೆಯನ್ನ ನೀಡಿದ್ದರು. ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದರು. ನಾನು ಕಾಂತೇಶ್ ಇಬ್ಬರು ಯಡಿಯೂರಪ್ಪ ಅವರ ಮನೆಗೆ ಹೋದಾಗ ಬಹಳ ಸ್ಪಷ್ಟವಾಗಿ ಹೇಳಿದ್ದರು. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂತೇಶ ನಿಲ್ಲಿಸುತ್ತೇನೆ. ಟಿಕೆಟ್ ಕೊಡಿಸುವುದು ಪಕ್ಕ ಅಂತ ಹೇಳಿದರು. ಆದರೆ ಯಡಿಯೂರಪ್ಪನವರ ಹಾಗೂ ಅವರ ಮಗ ಷಡ್ಯಂತರ ಮಾಡಿ ನನ್ನ ಮಗನಿಗೆ ಲೋಕಸಭಾ ಟಿಕೆಟ್ ಕ್ಷೇತ್ರಕ್ಕೆ ಟಿಕೆಟ್ ತಪ್ಪಿಸಿದ್ದಾರೆ. ಈಗ ಎಎಲ್ ಸಿ ಮಾಡುತ್ತೇನೆ ಎಂದಿದ್ದಾರೆ ನಾನು ನಂಬಲ್ಲ ಎಂದರು.