ಮೈಸೂರು : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಿರುವ ಹಿನ್ನಲೆ ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸಂಸದರಾಗಿ ಎರಡು ಬಾರಿ ಗೆದ್ದು ಉತ್ತಮ ಕೆಲಸ ಮಾಡಿದ್ದ ಪ್ರತಾಪ್ ಸಿಂಹರಿಗೆ ಈ ಬಾರಿ ಟಿಕೆಟ್ ಕೊಡದೆ ಮಹಾರಾಜ ಯದುವೀರ್ ಅವರಿಗೆ ಮಣೆ ಹಾಕಿರುವುದು ಅನೇಕ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಒಂದು ಮೂಲಗಳ ಪ್ರಕಾರ ಕೋಟ ಶ್ರೀನಿವಾಸ್ ಪೂಜಾರಿ ಅವ್ರಿಗೆ ಲೋಕಸಭಾ ಟಿಕೆಟ್ ಕೊಟ್ಟಿರುವ ಬಿಜೆಪಿ, ಅವರಿಂದ ತೆರವಾಗುವ ಎಂ.ಎಲ್.ಎ ಸ್ಥಾನಕ್ಕೆ ಪ್ರತಾಪ್ ಸಿಂಹ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಗಳು ಜೋರಾಗಿದೆ.
ಸದ್ಯ ಬಿಜೆಪಿಯಲ್ಲಿ ಕಟ್ಟರ್ ಹಿಂದೂ ಫೈರ್ ಬ್ರಾಂಡ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಟೀಕಿಸುವ ಶಕ್ತಿ ಪ್ರತಾಪ್ ಸಿಂಹರಿಗಿದೆ. ವಿಧಾನಸಭೆಯಲ್ಲಿ ಬಿಜೆಪಿಯನ್ನು ಡಿಫೆಂಡ್ ಮಾಡಿಕೊಳ್ಳುವ ಕಲೆಯು ಅವರಿಗಿದೆ ಹಾಗಾಗಿ ರಾಜ್ಯ ರಾಜಕೀಯಕ್ಕೆ ಪ್ರತಾಪಸಿಂಹ ಅವಶ್ಯಕತೆಯಿದೆ ಎಂದು ಬಿಜೆಪಿ ಕಾರ್ಯಕರ್ತರ ಕೂಗಾಗಿದೆ. ಪ್ರತಾಪ್ ಸಿಂಹರ ಕೆಲ ಹೇಳಿಕೆಗಳು, ಸ್ಮೋಕ್ ಬಾಂಬ್ ಆರೋಪಿಗೆ ಟಿಕೆಟ್ ಕೊಟ್ಟ ವಿಚಾರ, ಕೆಲ ನಾಯಕರ ವಿರೋಧ ಟಿಕೆಟ್ ಕೈ ತಪ್ಪಲು ಕಾರಣವಾಗಿದೆ.
ಸದ್ಯ ರಾಜ್ಯ ರಾಜಕಾರಣಕ್ಕೆ ಪ್ರತಾಪಸಿಂಹ ಎಂಟ್ರಿ ಆಗುತ್ತಾ ಇಲ್ಲ ಬೇರೆ ಹುದ್ದೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ಬಳಸಿಕೊಳ್ಳುತ್ತಾ ಕಾದು ನೋಡಬೇಕಿದೆ.