ಮೈಸೂರು : ಯದುವೀರ್ ಗೆ ಬಿಜೆಪಿ ಟಿಕೆಟ್ ಹಿನ್ನಲೆ
ಕಾಂಗ್ರೆಸ್ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿದೆ.
ಬಿಜೆಪಿ ಒಕ್ಕಲಿಗ ಮುಖಂಡ ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎನ್ನಲಾಗಿದೆ.
ಮೈಸೂರು ಕೊಡಗು ಒಕ್ಕಲಿಗರು ಅತಿ ಹೆಚ್ಚು ಮತದಾರರನ್ನ ಹೊಂದಿರುವ ಕ್ಷೇತ್ರ. ಒಕ್ಕಲಿಗರು ಹಾಗೂ ಅಹಿಂದ ಮತಗಳನ್ನ ಒಗ್ಗೂಡಿಸಿ ಬಿಜೆಪಿ ಟಕ್ಕರ್ ಕೊಡಲು ಪ್ಲಾನ್. ಈಗಾಗಲೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಯಿಂದ ಸ್ಪರ್ಧೆ ಮಾಡಿದ್ದ ಕವೀಶ್ ಗೌಡ. ಕೆಲವು ದಿನಗಳ ಕಾಲ ಕ್ಷೇತ್ರ ಸಂಚಾರ ಮಾಡಿ 50 ಸಾವಿರಕ್ಕು ಹೆಚ್ಚು ಮತಗಳನ್ನ ಪಡೆದಿದ್ದ ಕವೀಶ್ ಗೌಡ.
ಇದೀಗ ಈ ಕಾರಣದಿಂದಾಗಿ ಕವೀಶ್ ಗೌಡ ಸೂಕ್ತ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್ ಹಿರಿಯ ಮುಖಂಡರು. ಜೊತೆಗೆ ಕ್ಲೀನ್ ಇಮೇಜ್ ಹೊಂದಿರುವ ಕವೀಶ್. ಚಾಮರಾಜ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸದಿಂದಲೇ ಸದ್ದು ಮಾಡಿದ್ದ ಕವೀಶ್ ತಂದೆ ಮಾಜಿ ಶಾಸಕ ದಿ. ವಾಸು.ಅನುಕಂಪದ ಅಲೆ ವರ್ಕ್ ಔಟ್ ಮಾಡಲು ಕಾಂಗ್ತೇಸ್ ತಂತ್ರಗಾರಿಕೆ ನಡೆಸುತ್ತಿದೆ.