ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಕೇಳಿ ಬರುವ ಸಾಧ್ಯತೆ ಇದೆ. ದಲಿತರಿಗೆ ಸಿಎಂ ಆಗುವ ಅವಕಾಶ ಸಿಗಲಿಲ್ಲವೆಂದು ಸಚಿವ ಡಾ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂದಿಸಿದಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿ ದಲಿತ ಸಿಎಂ ಕೂಗಿಗೆ ದನಿಗೂಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಬೇಕು ಎಂಬುದು ಬಹುತೇಕ ಶಾಸಕರ ಅಭಿಪ್ರಾಯವಾಗಿದೆ. ಒಂದು ವೇಳೆ ಸಿಎಂ ಬದಲಾಯಿಸುವ ಚಿಂತನೆ ಇದ್ದರೇ ರಾಜ್ಯದಲ್ಲಿ ಸಿಎಂ ಹುದ್ದೆಗೆ ದಲಿತರನ್ನ ಆಯ್ಕೆ ಮಾಡಲಿ. ಅದರಲ್ಲೂ ಪರಮೇಶ್ವರ್ ಅರ್ಹತೆಯುಳ್ಳವರು ಪರಮೇಶ್ವರ್ ಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ ಎನ್ನುವ ಮೂಲಕ ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಹಾಗೆಯೇ ಡಿಕೆ ಶಿವಕುಮಾರ್ ಸಿಎಂ ಆಗಬಾರದು ಅಂತೇನಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಸಹ ಸಿಎಂ ಆಗಬಹುದು. ಬೆಳಿಗ್ಗೆ ಕೇಳಿದರೇ ಸಂಜೆ ದಲಿತ ಸಿಎಂ ಕೊಟ್ಟು ಬಿಡ್ತಾರಾ..? ಅದಕ್ಕೆ ಈಗಿನಿಂದಲೇ ನಾವು ನಮ್ಮ ಬೇಡಿಕೆ ಇಡುತ್ತಿದ್ದೇವೆ ಎಂದು ಸಚಿವ ಕ.ಎನ್ ರಾಜಣ್ಣ ತಿಳಿಸಿದರು