ಮೈಸೂರು : ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಸಿದ್ದು, ಬಾಂಬ್ ಬ್ಲಾಸ್ಟ್ ಆಗಿರುವುದು ನಿಜ.ಮಾಸ್ಕ್, ಟೋಪಿ ಹಾಕಿಕೊಂಡು ವ್ಯಕ್ತಿಯೊಬ್ಬ ಬಸ್ ನಲ್ಲಿ ಬಂದಿದ್ದಾರೆ. ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿಸಿದ್ದಾರೆ ಎಂದಿದ್ದಾರೆ.
ಪ್ರಾಣಾಪಾಯದಿಂದ ಕೆಲವರು ಪಾರಾಗಿದ್ದಾರೆ.
ನೆನ್ನೆಯೇ ಡಿಸಿಎಂ, ಹೋಂ ಮಿನಿಸ್ಟರ್ ವಿಸಿಟ್ ಮಾಡಿದ್ದಾರೆ. ನಾನು ಕೂಡ ಈವತ್ತು ಆಸ್ಪತ್ರೆಗೆ ಹಾಗು ಸ್ಥಳಕ್ಕೆ ಹೋಗುತ್ತೇನೆ. ಇದು ಸಂಘಟನೆಯ ಕೆಲಸವೋ ಇಲ್ಲವೋ ಗೊತ್ತಿಲ್ಲ. ಸೀರಿಯಸ್ ಆಗಿ ತನಿಖೆ ನಡೆಯುತ್ತಿದೆ. ಅಲ್ಪ ಸಂಖ್ಯಾತರ ಓಲೈಕೆಗಾಗಿ ಈ ಥರ ನಡೆದಿದೆ ಎಂದ ಬಿಜೆಪಿ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು.ಮಂಗಳೂರು ಬಾಂಬ್ ಬ್ಲಾಸ್ಟ್ ಹಾಗು ಬೆಂಗಳೂರು ಬ್ಲಾಸ್ಟ್ ಸಂಬಂಧವಿಲ್ಲ.
ಬ್ಲಾಸ್ಟ್ ಮಾಡಿದ್ದನ್ನ ಖಂಡಿಸುತ್ತೇನೆ ಎಂದರು.
ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ವರದಿ ಬಳಿಕ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಉತ್ತರಿಸಿ, ಇನ್ನೂ ಕೂಡ ಯಾವುದೇ ವರದಿ ಕೈ ಸೇರಿಲ್ಲ. ಎಫ್ ಎಸ್ ಎಲ್ ರಿಪೋರ್ಟ್ ಈವರಗೆ ಬಂದಿಲ್ಲ.ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.