ಸಂಸದ ಶ್ರೀನಿವಾಸ್ ಪ್ರಸಾದ್ ಚುನಾವಣ ರಾಜಕಾರಣಕ್ಕೆ 50ವರ್ಷ ತುಂಬಿದ ಹಿನ್ನೆಲೆ, ಅಭಿನಂದನಾ ಸಮಾರಂಭ- ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಠಿ
ನಾನು ಇದುವರೆಗೂ 9 ಬಾರಿ ಪಾರ್ಲಿಮೆಂಟ್ ಎಲೆಕ್ಷನ್ ಎದುರಿಸಿದ್ದೇನೆ,4ಬಾರಿ ವಿಧಾನಸಭಾ ಚುನಾವಣೆ ಎದುರಿಸಿ, 2ಬಾರಿ ಆಯ್ಕೆಯಾಗಿದ್ದೇನೆ,
ಅಟಲ್ ಬಿಹಾರಿ ವಾಜಪೇಯಿ ಅವರ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಸಚಿವನಾಗಿ ಕೆಲಸ ಮಾಡಿದ ಅನುಭವ ನನಗಿದೆ,1974 ಮಾರ್ಚ್ 17ರಿಂದ 2024ದವರಗೆ14ಬಾರಿ ಚುನಾವಣೆ ಎದುರಿಸಿದ್ದೇನೆ, ನನ್ನ ಚುನಾವಣಾ ರಾಜಕೀಯಕ್ಕೆ50ವರ್ಷ ತುಂಬಿದೆ, ಈ ಹಿನ್ನೆಲೆ
ಅಭಿಮಾನಿಗಳಿಂದ ಸುವರ್ಣ ಮಹೋತ್ಸವ ಆಚರಿಸುತ್ತಿದ್ದಾರೆ ಎಂದರು.
ದಿನಾಂಕ 17-3-2024ದ ಭಾನುವಾರ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ,ಈ ಕಾರ್ಯಕ್ರಮ ಕ್ಕೆ ಅತಿಥಿಗಳಾಗಿ ಮಾಜಿ ಸಿ,ಎಂ ಎಸ್ ಎಂ ಕೃಷ್ಣ, ವೀರಪ್ಪ ಮೋಯ್ಲಿ, ಡಾ ಚಂದ್ರಶೇಖರ್ ಕಂಬಾರ, ಕಾಗೋಡು ತಿಮ್ಮಪ್ಪ, ಪಿ,ಜಿ,ಆರ್ ಸಿಂಧ್ಯಾ ಸೇರಿ ಹಲವರು ಭಾಗಿ,
ನಾನೇ ನನ್ನ ಸ್ವತಃ ಸ್ವಾಭಿಮಾನಿ ನೆನೆಪುಗಳು ಅಭಿಮಾನದ ಗ್ರಂಥ ಬರೆಯುತ್ತಿದ್ದೇನೆ,ಪಾರ್ಲಿಮೆಂಟ್ ನಲ್ಲಿ ನನ್ನ ಮಾತುಗಳು ಸಾಧನೆಗಳು ಸೇರಿದಂತೆ ಎಲ್ಲಾ ವಿಚಾರಗಳನ್ನು ಕೂಡಾ ಬರೆಯುತ್ತೇನೆ,
ಇನ್ನು ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ, ಯಾವುದೇ ಪಕ್ಷದಲ್ಲೂ ಇರುವುದಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ನನ್ನ ಜೀವನದಲ್ಲಿ 7ಜನ ಪ್ರಧಾನಿಗಳನ್ನು ನೋಡಿದ್ದೇನೆ,
ಇವರು ಎಲ್ಲಾರ ಆಡಳಿತ ವೈಖರಿಯನ್ನು ಮುಂದಿನ ದಿನಗಳಲ್ಲಿ ಪುಸ್ತಕ ಬರೆಯುತ್ತೇನೆ ಎಂದ ಶ್ರೀನಿವಾಸ್ ಪ್ರಸಾದ್.ನನ್ನ ಜೀವಿತ ಅವಧಿಯಲ್ಲಿ ಸ್ವಾಮಿಮಾನದ ರಾಜಕೀಯ ಮಾಡಿದ್ದೇನೆ, ಒಳ್ಳೆಯ ಕೆಲಸ ಮಾಡಿದ ಆತ್ಮ ತೃಪ್ತಿ ಇದೆ ಎಂದ ಸಂಸದ,ಯಾವ ಪಕ್ಷಕ್ಕೆ ಹೋಗಿದ್ದರೂ ಕೂಡಾ ಯಾರಿಗೂ ಹೊರೆಯಾಗದಂತೆ ನಡೆದುಕೊಂಡಿದ್ದೇನೆ.ನನ್ನ ಪುಸ್ತಕದಲ್ಲಿ ಸಾಕಷ್ಟು ವಿಚಾರಗಳು ಇರಲಿವೆ ಎಂದು ತಿಳಿಸಿದರು.