ಪಾಕಿಸ್ತಾನ್ ಪರ ಜಿಂದಾಬಾದ್ ಘೋಷಣೆ ಹಿನ್ನಲೆ
ಸಂಸದ ನಶೀರ್ ಹುಸೇನ್ ಬೆಂಬಲಿಗರು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಗಲ್ಲಿ ಹಾಗೂ ತಮ್ಮ ಏರಿಯಗಳಲ್ಲಿ ಕೂಗುತ್ತಿದ್ದ ವ್ಯಕ್ತಿಗಳು ಈಗ ರಾಜಾರೋಷವಾಗಿ ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇವರ ಮನ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ತಿಳಿದುಕೊಳ್ಳಬೇಕು ಎಂದು ಬಿಜೆಪಿ ನಗರ ವಕ್ತಾರ ಕೆ.ವಸಂತ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಈ ದೇಶದ ಅನ್ನ ತಿಂದು ನೀರು ಕುಡಿದು ಪಾಕ್ ಪರ ಘೋಷಣೆ ಖಂಡನೀಯ. ಈ ರೀತಿಯ ಉದ್ದತನಟ ನಮ್ಮ ದೇಶದಲ್ಲಿ ನಡೆಯಲ್ಲ.ಈ ದೇಶದ ಕಾನೂನಿಗೆ ಗೌರವ ಕೊಡಬೇಕು.ಈ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಸಮರ್ಥನೆ ಮಾಡಿಕೊಳಲ್ಲು ಹೊರಟಿದೆ.ಡಿಕೆ ಸುರೇಶ್ ಭಾರತದ ವಿಭಜನೆ ಮಾಡಬೇಕು ಎನ್ನುತ್ತಾರೆ.ಡಿಕೆ ಶಿವಕುಮಾರ್ ಮುಸ್ಲಿಂ ನಮ್ಮ ಬ್ರದರ್ಸ್ ಅಂತಾರೆ. ನಾಶೀರ್ ಹುಸೇನ್ ನೆನ್ನೆ ಮಾಧ್ಯಮದ ಸ್ನೇಹಿತರಿಗೆ ಏಕವಚನದಲ್ಲಿ ನಡಿ ಎಂದು ಹೇಳುತ್ತಾರೆ. ನೆನ್ನೆ ಯಾರು ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಅಂತಹರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದರು.
ಮಾಧ್ಯಮ ಈ ಸಂವಿಧಾನದ ನಾಲ್ಕನೇ ಅಂಗ
ದೇಶದ ಹಿತದೃಷ್ಟಿಯಿಂದ ಮಾಧ್ಯಮ ಕೆಲಸ ಮಾಡುತ್ತಿದೆ
ಮಾಧ್ಯಮದ ಮೇಲೆ ದಬ್ಬಾಳಿಕೆ ಮಾಡುತ್ತಿರುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಕೆ.ವಸಂತ್ ಕುಮಾರ್ ಹೇಳಿದರು.