ಮೈಸೂರು: ಸಿಎಂ ಸಿದ್ದರಾಮಯ್ಯ ಬರೀ ಗ್ಯಾರಂಟಿಗಳನ್ನು ಹೇಳಿಕೊಂಡು ಕಿರುಚಾಡುತ್ತಿದ್ದಾರೆ: ಅವರು ಲೇಬರ್ ವಾರ್ಡ್ ಬಳಿ ಆ ರೀತಿ ಕಿರುಚಾಡಿದರೆ ಹೆರಿಗೆಯೇ ಆಗಿಬಿಡುತ್ತದೆ ಎಂದು ಸಂಸದ ವಿ ಶ್ರೀನಿವಾಸಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಕೇವಲ ಗ್ಯಾರಂಟಿಗಳನ್ನು ಹೇಳಿಕೊಂಡು ಕಿರುಚಾಡ್ತಿದಾರೆ. ಅವರು ಆ ರೀತಿ ಲೇಬರ್ ವಾರ್ಡ್ ಬಳಿ ಕಿರುಚಾಡಿದ್ರೇ ಹೆರಿಗೇನೇ ಆಗಿ ಬಿಡುತ್ತೇ.
ಮೋದಿ ಜಾಗತೀಕ ನಾಯಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ನಾಯಕ.
ಮೋದಿಗೆ ಸಿದ್ದರಾಮಯ್ಯ ಸರಿ ಸಮನಾದ ನಾಯಕನಲ್ಲ.
ಇಂತವರು ಮೋದಿ ಬಗ್ಗೆ ಟೀಕೆ ಮಾಡ್ತಿದಾರೆ.
ಮೋದಿ ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆಯೂ ಇಲ್ಲಸಲ್ಲದ ಆರೋಪಗಳನ್ನು ಮಾಡ್ತಿದಾರೆ. ಜಿ ಎಸ್ ಟಿ ಪಾಲನ್ನು ಕೇಂದ್ರ ಸಮರ್ಪಕವಾಗಿ ಹಂಚಿಕೆ ಮಾಡುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪ ನಿರಾಧಾರ.
ಜನರು ಎಲ್ಲವನ್ನೂ ನೋಡುತ್ತಿದ್ದಾರೆ.
ಜನಾದೇಶವೇ ಅಂತಿಮ ಎಂದು ಸಂಸದ ವಿ ಶ್ರೀನಿವಾಸಪ್ರಸಾದ್ ಹೇಳಿದರು