ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಹೇಳಿದ್ದಾರೆ
ಖಾಸಗಿ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಸಚಿವರು ಮಾತ್ರವಲ್ಲ ಕಾಂಗ್ರೆಸ್ ಸಂಭವ್ಯ ಪಟ್ಟಿಯಲ್ಲಿ ಹೆಸರು ಇಲ್ಲದ ಸಚಿವರು ಹಾಗೂ ಶಾಸಕರ ಸ್ಪರ್ಧೆಯೂ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ
ಸರ್ವೆಯಲ್ಲಿ ಸಂಭವನೀಯ ಅಭ್ಯರ್ಥಿ ಹಾಗೂ ಸಚಿವರಿಗಿಂತ ಜಿಲ್ಲೆಯ ಶಾಸಕರ ಹೆಸರೇ ಹೆಚ್ಚು ಪ್ರಭಾವಿ ಎಂಬ ವರದಿ ಬಂದರೆ ಸಂಭವ್ಯರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಅಂತಹ ಶಾಸಕರ ಸ್ಪರ್ಧೆ ಅನಿವಾರ್ಯ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸರ್ವೆ ಆಧರಿಸಿ ಹೈಕಮಾಂಡ್ ಯಾರ ಹೆಸರು ಸೂಚಿಸುತ್ತದೆಯೋ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಸಭೆಯಲ್ಲಿ ಸುರ್ಜೆವಾಲ ಸೂಚನೆ ನೀಡಿದ್ದಾರೆ