ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದು ಕಡ್ಡಾಯ. ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಬರೆಸಿ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಆದೇಶ ಮಾಡಿದ್ದಾರೆ.
ನಮ್ಮ ಸರ್ಕಾರವು ಬಸವಣ್ಣನವರನ್ನು ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ನಮ್ಮ ನಡೆ-ನುಡಿಗಳಲ್ಲಿ ಭಿನ್ನತೆ ಇರಬಾರದು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದು ಕಡ್ಡಾಯ ಗೊಳಿಸಲಾಗಿದ್ದು, ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಾಗಿ ಅದರಲ್ಲಿ ಬರೆಸಿ ಹಾಕುವಂತೆ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ.