ಜೆಡಿಎಸ್ ವಿಶ್ವಾಸ ಕಾಪಾಡಿಕೊಂಡರೆ ಟಾರ್ಗೆಟ್ 28 ಸಾಧ್ಯವಾಗುತ್ತದೆ. ಹೋದಲ್ಲಿ, ಬಂದಲ್ಲಿ ಕಾರ್ಯಕರ್ತರ ಸಭೆ ಹಾಗೂ ಮೈತ್ರಿ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಲು ಹೋಗಬೇಡಿ ಎಂದು ಬಿಜೆಪಿ ನಾಯಕರಿಗೆ ಗೃಹ ಸಚಿವ ಅಮಿತ್ ಶಾ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.
ಕಳೆದ ವಿಧಾಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಬ್ಬರದ ಪ್ರಚಾರ ಮಾಡಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಜನ ಬಹುಮತ ನೀಡಿದರು. ಅದರಲ್ಲೂ ಮೈಸೂರು ಭಾಗದಲ್ಲಿ ಬಿಜೆಪಿಗೆ ನಿರೀಕ್ಷೆಯಷ್ಟು ಗೆಲುವಾಗಿರಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್ ಶಾ ಜೆಡಿಎಸ್ ಮೈತ್ರಿಯೊಂದಿಗೆ ಒಕ್ಕಲಿಗರ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಬುನಾದಿಯನ್ನು ಭದ್ರಪಡಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
bjp-Jds ಮೈತ್ರಿ ಸೀಟು ಹಂಚಿಕೆ ಹಾಗೂ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕೆಂಬ ಬಗ್ಗೆ ನಾವು ನಿರ್ಧಾರ ಮಾಡುತ್ತೇವೆ. ನಿಮಗೆ ವಹಿಸಿರುವ ಟಾಸ್ಕ್ ಮಾತ್ರ ಪೂರ್ಣ ಮಾಡಿ. ಎಂದು ಅಮಿತ್ ಶಾ ಮೈಸೂರು ಕ್ಲಸ್ಟರ್ ಸಭೆಯಲ್ಲಿ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಾಯಕರು ನಿಮಗೆ ನೀಡಿರುವ ಟಾಸ್ಕ್ ಸಂಪೂರ್ಣ ಮಾಡಿ, ಅದನ್ನು ಬಿಟ್ಟು ಬೇರೆ ಏನು ಹೇಳಿಕೆಗಳನ್ನು ನೀಡಬೇಡಿ ಈ ಬಾರಿ ಹೆಚ್ಚು ಮತಗಳು ಬಿಜೆಪಿಗೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚನೆ ಕೊಟ್ಟಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.