ಮಂಡ್ಯ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಒಮ್ಮೆ ನಿಮ್ಮನ್ನ ಸಂಪೂರ್ಣ ಗೆಲ್ಲಿಸಿದ್ದಾರೆ.ಮತ್ತೊಮ್ಮೆ ಸೋಲಿಸಿ, ನಮ್ಮನ್ನ ಗೆಲ್ಲಿಸಿದ್ದಾರೆ.ಇಂತಹ ವಿಚಾರ ಮುಂದಿಟ್ಟುಕೊಂಡು ಜನರ ಮನಸ್ಸು ಬದಲಿಸಲು ಆಗಲ್ಲ.ಈ ವಿಚಾರ ನಿಮಗೆ ಶೋಭೆ ತರಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವೊಬ್ಬ ಮಾಜಿ ಪ್ರಧಾನಿ ಮಗ.ಮೊನ್ನೆ ಬೆಂಗಳೂರಿನಲ್ಲಿ ಸಿಕ್ಕಿದ್ರು. ಚಲುವರಾಯಸ್ವಾಮಿ ಯಾರ ಹಣೆಬರಹ ಯಾರೂ ಬದಲಿಸಲು ಸಾಧ್ಯವಿಲ್ಲ.ನಿನ್ನ ಕೆಲಸ ನೀನು ಮಾಡು ಅಂತ ಸಲಹೆ ನೀಡಿದ್ರು.ಹೆಚ್ಡಿಕೆ ಅವರ ಈ ಹಿಂದಿನ ಬಿಜೆಪಿ, RSS ವಿರುದ್ಧದ ಹೇಳಿಕೆ, ಟ್ವೀಟ್ ಪ್ರದರ್ಶಿಸಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೆರಗೋಡು ಗ್ರಾಮದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ.ಆ ಗ್ರಾಮದವರ ಯಾರ ಪಾತ್ರವೂ ಇದರಲ್ಲಿ ಇಲ್ಲ.ಹೆಚ್ಡಿಕೆ, ಅಶೋಕ್, ಸಿ.ಟಿ.ರವಿ ಅಂತಹವರು ಇದನ್ನ ಮಾಡಿಸಿರಬಹುದು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದರೆ ಏನು ಮಾಡ್ತಿದ್ದರು ಹೇಳ್ಬೇಕು.ರಾಷ್ಟ್ರ ಧ್ವಜ ಹಾರಿಸಿದ್ದು ಅಪರಾಧನ?ರಾಷ್ಟ್ರಕ್ಕೆ ಸಲ್ಲಿಸಿದ ಗೌರವ ಅಲ್ವ?ಜನರ ನೆಮ್ಮದಿ ಕೆಡಿಸುವ ವಾತಾವರಣ ನಿರ್ಮಾಣ ಮಾಡಿರೋದನ್ನ ಜಿಲ್ಲೆಯ ಜನ ಸಹಿಸಲ್ಲ ಎಂದು ಕಿಡಿಕಾರಿದರು.
ಮತ್ತೆ ಈ ಜಿಲ್ಲೆಯ ಜನರನ್ನ ಸುಳ್ಳು ಹೇಳಿ, ಧರ್ಮದ ಹೆಸರಲ್ಲಿ ನಂಬಿಸುವ ಭ್ರಮೆಯಿಂದ ಹೊರ ಬನ್ನಿ.
ಸಾಕಷ್ಟು ಹಿರಿಯರು ಸೋತಿದ್ದಾರೆ. ಸಾವಿರಾರು ಎಕರೆ ಸರ್ಕಾರಿ ಆಸ್ತಿ ಉಳ್ಳವರಿಗೆ ಮಾಡಿಕೊಟ್ಟ ಕೀರ್ತಿ ನಿಮ್ಮ ಸರ್ಕಾರದ್ದು.ಹೈವೇ, ಕಾವೇರಿ, ಮೈಶುಗರ್, ಜಿಲ್ಲೆಯ ಸಮಸ್ಯೆ ಬಗ್ಗೆ ಹೋರಾಟ, ಚರ್ಚೆ ಮಾಡಲಿಲ್ಲ. ಪ್ರಧಾನಿ ಹತ್ತಿರ ಹೋಗಿ ಫೋಟೋ ತೆಗೆಸ್ತೀರಲ್ಲ.
ಬರಗಾಲದ ಹಣ ಬಿಡುಗಡೆ ಬಗ್ಗೆ ಯಾಕೆ ಕೇಳಲಿಲ್ಲ. ಈ ಜಿಲ್ಲೆಯ ಜನರ ಬಾಳಲ್ಲಿ ಬೆಂಕಿ ಹಚ್ಚಲು ಬಂದಿದ್ದೀರಿ? ಕುಮಾರಸ್ವಾಮಿ ಅವರೇ ನಿಮ್ಮನ್ನ ಈ ಜಿಲ್ಲೆಯ ಜನ ಸಹಿಸಲ್ಲ ಎಂದರು.
ಕೇಸರಿ ಶಾಲು ಹಾಕಿ ಆಗಿದೆ.ಅವಶ್ಯಕತೆ ಇದ್ದರೇ ಬಿಜೆಪಿ ಸೇರ್ಪಡೆ ಆಗಿ.ಆದರೆ ಮತ್ತೆ ಇಂತಹ ಕೀಳು ಮಟ್ಟದ ಹೋರಾಟ ಬೇಡ.ಜಿಲ್ಲೆಯ ಜನರ ಬದುಕಿನಲ್ಲಿ ಆಟವಾಡೋದು ಬೇಡ.ಇವರ ಸುಳ್ಳು, ಪ್ರಚೋದನೆಗೆ ಕಿವಿಗೊಡಬೇಡಿ.ನಾವು ಮೈಶುಗರ್ ಆರಂಭ ಮಾಡಿದ್ದೇವೆ.
ಜಿಲ್ಲೆಯ ಅಭಿವೃದ್ಧಿಗೆ ಬದ್ಧರಿದ್ದೇವೆ.
ಏನೇ ವಿಷಯ, ಸಮಸ್ಯೆ ಇದ್ದರೂ ಮುಕ್ತವಾಗಿ ಚರ್ಚೆ ಮಾಡೋಣ ಬನ್ನಿ.ಸದಾ ಜಿಲ್ಲೆಯ ಜನರ ಪರ ನಾವು ಇರ್ತೇವೆ ಎಂದು ಹೇಳಿದರು.