ಹಾಸನ : ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆ ವಿಚಾರಕ್ಕೆ ಕಾಂಗ್ರೆಸ್ ವಿರುದ್ಧ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆ, ಆಲೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಗದೀಶ್ ಶೆಟ್ಟರ್ ಸಮರ್ಥ ನಾಯಕರು, ಮಾಜಿ ಮುಖ್ಯಮಂತ್ರಿ, ಅವರನ್ನು ಕಾಂಗ್ರೆಸ್‌ನವರು ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಉತ್ಸಾಹದಿಂದ ಸೇರಿಸಿಕೊಂಡರು.
ಸೇರಿಸಿ ಕೊಂಡ ಮೇಲೆ ಮಂತ್ರಿ ಮಾಡುವಷ್ಟು ಸೌಜನ್ಯ ಬೇಡವೇ ಎಂದು ಪ್ರಶ್ನೆ ಮಾಡಿದರು.
ನಾನು ಯಾರ ಬಗ್ಗೆ ನಿಂದನೆ ಮಾಡಲ್ಲ, ರಾಜ್ಯದ ಸಿಎಂ ಆಗಿ, ಸಮರ್ಥ ನಾಯಕರಾಗಿ ಕೆಲಸ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದವರನ್ನು ಕರೆದು ಕೊಂಡು ಬಂದು ಮಂತ್ರಿ ಮಾಡಲಿಲ್ಲ
ಕಾಂಗ್ರೆಸ್ ಹೇಗೆ ಮೋಸ ಮಾಡುತ್ತೆ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕುಇದು ಕಾಂಗ್ರೆಸ್‌ನ ದೌರ್ಬಲ್ಯಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಹಂತಹಂತವಾಗಿ ನೆಲ ಕಚ್ಚುತ್ತೆ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದು ಸ್ವಾಗತ ಎಂದರು.