ಕಮಲ ಪಥದ ತಂಡದಿಂದ ರಚನೆಯಾಗಿರುವ ಪರಿವರ್ತನಾ ಪಥ , ರಾಮ ಪಥ ಎಂಬ ಪುಸ್ತಕಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಇದೆ. ಇದೊಂದು ಐತಿಹಾಸಿಕ ಘಳಿಗೆ. ಈ ಕಾರ್ಯಕ್ರಮಕ್ಕೆ ದೇಶದ ಭಕ್ತರು ಮಾತ್ರವಲ್ಲದೆ, ಜಗತ್ತಿನ ವಿವಿಧ ಕಡೆಗಳಲ್ಲೂ ಉತ್ಸುಕ ಕಾಣುತ್ತಿದೆ. ಪ್ರಭು ಶ್ರೀ ರಾಮಚಂದ್ರ ಮತ್ತು ಕರ್ನಾಟಕದ ನಡುವಿನ ಸಂಬಂಧ ನಿನ್ನೆ ಮೊನ್ನೆಯದಲ್ಲ.
ಭಾರತದೊಂದು ಪ್ರಾಚೀನ ಸಂಸ್ಕೃತಿ ಪುನರ್ ಪ್ರತಿಷ್ಠಾಪನೆ ಆಗುತ್ತಿದೆ. ರಾಮಮಂದಿರ ನಿರ್ಮಾಣ ಆಗುತ್ತಿದೆ.
ಇದರ ಜೊತೆಗೆ ಕಾಶಿ ವಿಶ್ವನಾಥ್ ಕಾರಿಡಾರ್ ಅಭಿವೃದ್ಧಿ ಆಗುತ್ತಿದೆ.
ಭಾರತದ ಪ್ರಾಚೀನ ಕಾಲವನ್ನು ಪುನರ್ ಪ್ರತಿಷ್ಠಾಪನೆ ಆಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಗೊಂದಲದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ.
ದ್ವಂದ್ವ ಇದೆ. ಇಡೀ ದೇಶದಲ್ಲಿ ರಾಮ ಜಪ ನಡೆಯುತ್ತಿದೆ.
ರಾಜ್ಯದಲ್ಲಿ ಶ್ರೀಕಾಂತ್ ಪೂಜಾರಿ ಅವರನ್ನು ಆರೆಸ್ಟ್ ಮಾಡಿಸಿತ್ತು.
ಕೋರ್ಟ್‌ಗೆ ಕುಂಠ ನೆಪ ಹೇಳಿ ಬಂಧಿಸಿತ್ತು.ಮತ್ತೊಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ಆಮಂತ್ರಣ ನಿರಾಕರಿಸಿ, ಅಸಂಖ್ಯಾತ ಭಾರತೀಯರಿಗೆ ಅವಮಾನ ಮಾಡಿದ್ದಾರೆ. ಎಲ್ಲಿ ಜನವರಿ 22 ರಂದು ಅಯೋಧ್ಯೆಗೆ ಹೋದ್ರೆ, ಅಲ್ಪಸಂಖ್ಯಾತರಿಗೆ ದುಃಖ ಆಗುತ್ತದೋ ಎಂಬ ಕಾರಣಕ್ಕೆ ಅವರು ಆಮಂತ್ರಣ ನಿರಾಕರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಅವಮಾನವಾದ್ರೆ ಕಾಂಗ್ರೆಸ್‌ನವರಿಗೆ ಆದ ಹಾಗೇ.
ಹೀಗಾಗಿ, ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬರುತ್ತಿಲ್ಲ.
ಕರ್ನಾಟಕ ರಾಜ್ಯ ರಾಮಮಂದಿರದ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದೆ.
ಅತಿ ಹೆಚ್ಚು ಕರಸೇವಕರು ಹೋಗಿರುವುದು ಇಲ್ಲಿಂದಲೇ.
ಯಡಿಯೂರಪ್ಪ, ರಾಮಚಂದ್ರೇಗೌಡ್ರು ಸೇರಿದಂತೆ ಅನೇಕ ಹಿರಿಯರು ಹೋಗಿದ್ದಾರೆ ಎಂದರು.
ಅಯೋಧ್ಯೆಯ ರಾಮಮಂದಿರದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಕರ್ನಾಟಕದವರು.
ರಾಮನ ವಿಗ್ರಹಕ್ಕೆ ಬಳಸಿರುವುದು ಹೆಚ್‌ಡಿಕೋಟೆಯ ಕಲ್ಲನ್ನ.
ಕೆತ್ತನೆ ಮಾಡಿರುವುದು ಮೈಸೂರಿನ ಅರುಣ್ ಯೋಗಿರಾಜ್.
ಇನ್ನು ಆರು ಶಿಲ್ಪಿಗಳು ನಮ್ಮವರೇ.
ಟ್ರಸ್ಟ್‌ನಲ್ಲಿ ಒಬ್ಬರು ನಮ್ಮ ಪೇಜಾವರ ಶ್ರೀಪಾದರು ಎಂದು ತಿಳಿಸಿದರು.
ಕರ್ನಾಟಕದ ಗಂಧ ಮತ್ತು ಗಂಧದ ಎಣ್ಣೆ ಬಳಕೆ ಮಾಡಲಾಗಿದೆ.
ಸಿಡಿಲು, ಗುಡುಗಿಗೂ ಏನೂ ಆಗದಂತೆ ನೋಡಿಕೊಳ್ಳುತ್ತಿರುವುದು ನಮ್ಮ ರಾಜ್ಯದ ಸಂಸ್ಥೆ.
800 ಟನ್‌ಗಳಷ್ಟು ಸಾದರಹಳ್ಳಿ ಕಲ್ಲು ನಮ್ಮದು.
ಅಯೋಧ್ಯೆಯಲ್ಲಿ ವಿನಾಯಕನನ್ನ ಅರಳಿಸಿರುವವರು ಉತ್ತರ ಕನ್ನಡದವರು.
ರಾಮಮಂದಿರದ ಸಂಪೂರ್ಣ ವಿದ್ಯುತ್ ಪೂರೈಕೆ ಮಾಡಿರುವವರು ರಾಜೇಶ್ ಶೆಟ್ಟಿ, ನಮ್ಮವರು.
ದ್ವಾರ ಕೆತ್ತಿರುವುದು ಕೊಪ್ಪಳದ ರಾಮಚಂದ್ರ ಅವರು.
ಇದೊಂದು ಐತಿಹಾಸಿಕ ಕ್ಷಣಕ್ಕೆ ಎದುರು ನೋಡುತ್ತಿದ್ದೇವೆ. ರಾಮ ಮಂದಿರಕ್ಕೆ ಇದು
ನಮ್ಮ ರಾಜ್ಯದ ಕೊಡುಗೆಗಳು ಎಂದರು.
ಪ್ರಾಣ ಪ್ರತಿಷ್ಠಾಪನೆ ಬಳಿಕ 60 ದಿನಗಳ ಕಾಲ ಕರ್ನಾಟಕದಿಂದ ರಾಮಭಕ್ತರು ಅಯೋಧ್ಯೆಗೆ ತೆರಳುತ್ತಾರೆ.
ವಿಶೇಷ ರೈಲಿನ ವ್ಯವಸ್ಥೆ ಆಗಿದೆ.
35 ಸಾವಿರಕ್ಕೂ ಹೆಚ್ಚು ರಾಮಭಕ್ತರು ತೆರಳಲಿದ್ದಾರೆ.
ಜನವರಿ 31 ರಿಂದ ಮಾರ್ಚ್ 15 ರವರೆಗೂ ತೆರಳಲಿದ್ದಾರೆ.
ಇದರ ಉಸ್ತುವಾರಿಯನ್ನು ಜಗದೀಶ್ ಹಿರೇಮನಿ ಅವರನ್ನು ನೇಮಿಸಲಾಗಿದೆ. 6 ದಿನಗಳ ಕಾಲ ಪ್ರವಾಸ ಇದೇ.
ಒಂದು ದಿನ ಸಂಪೂರ್ಣ ರಾಮಮಂದಿರದಲ್ಲೇ ಇದ್ದು, ರಾಮಜಪ ಮಾಡಲಿದ್ದಾರೆ.
ರೈಲಿನಲ್ಲಿ ಸಂಪೂರ್ಣ ಆಹಾರ ಒದಗಿಸುವ ಕೆಲಸ ಮಾಡಲಾಗಿದೆ.
ಅಲ್ಲಿ 48 ಭೋಜನ ಶಾಲೆಗಳನ್ನು ನೇಮಿಸಲಾಗಿದೆ.
25 ರೈಲಿನಲ್ಲಿ, ಪ್ರತಿ ರೈಲಿನಲ್ಲಿ 1500 ರಾಮಭಕ್ತರಂತೆ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ನನ್ನ ಒತ್ತಾಯ ಏನು ಅಂದರೆ, ರಾಮಭಕ್ತರಿಗೆ ಯಾವುದೇ ಅಡ್ಡಿ ಆತಂಕಗಳು ಬರದಂತೆ ಸಹಕಾರ ಕೊಡಬೇಕು.ಈಗಾಗಲೇ ಅನೇಕ ನಾಯಕರ ಹೇಳಿಕೆ ಗಮನಿಸಿದ್ರೆ, ಆಶಾಂತಿ ಮೂಡಿಸುವ ವಾತಾವರಣ ನಿರ್ಮಾಣ ಆಗಬಹುದು.
ಇಡೀ ದೇಶ ರಾಮಜಪ ಮಾಡುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಹಿತಕರ ಘಟನೆಗಳು ನಡೆಯದಂತೆ ಇಲ್ಲಿ ಎಚ್ಚರವಹಿಸಬೇಕು. ಅಲ್ಲದೆ
ಜನವರಿ 22 ರಂದು ಕರ್ನಾಟಕ 160 ಪಿವಿಆರ್ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಇರಲಿದೆ.
ಟಿವಿಗಳಲ್ಲಿ ನೇರ ಪ್ರಸಾರ ಇರಲಿದೆ.
ದೇವಾಲಯದಲ್ಲಿ ಸ್ವಚ್ಛಗೊಳಿಸುವ ಮೂಲಕ ಅಲ್ಲಿಯೇ ಕಾರ್ಯಕ್ರಮ ನೋಡುವುದು.
ಸಂಜೆ 5 ದೀಪಗಳನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಸಹಕಾರ ಕೊಡಬೇಕು.
ಮಂತ್ರಾಕ್ಷತೆ ನೀಡಲಾಗಿದೆ.
ನಮ್ಮ ನಿರೀಕ್ಷೆಗೂ ಮೀರಿ ಜನರು ಸಹಕಾರ ಕೊಡುತ್ತಿದ್ದಾರೆ ಎಂದರು.
ಬಿಕೆ ಹರಿಪ್ರಸಾದ್ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ,
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಹರಿಪ್ರಸಾದ್ ಸಾಮಾನ್ಯ ವ್ಯಕ್ತಿಯಲ್ಲ.
ವಿಚಾರ ಏನು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಅಲ್ಲದೆ, ಹರಿಪ್ರಸಾದ್ ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿದೆಯೋ? ರಾಜ್ಯ ಸರ್ಕಾರ ಟಾರ್ಗೆಟ್ ಮಾಡಿದೆಯೋ? ಬರುವ ದಿನ ಗೊತ್ತಾಗುತ್ತದೆ ಎಂದು ವಿಜಯೇಂದ್ರ ತಿಳಿಸಿದರು