ಬೆಂಗಳೂರು : ಕಾಂಗ್ರೆಸ್ ಕೆಲ ಶಾಸಕರು ಟಿಪ್ಪು ಜಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ ಸರ್ಕಾರಕ್ಕೆ ಬಿಜೆಪಿ ಟಾಂಗ್ ನೀಡಿದೆ.
ಲೋಕಸಭಾ ಚುನಾವಣೆಗಾಗಿ ಅಲ್ಪಸಂಖ್ಯಾತರ ಓಲೈಕೆಗೆ 10 ಸಾವಿರ ಕೋಟಿ ರೂ. ಕೊಡುತ್ತಿರುವ ಸಿದ್ದರಾಮಯ್ಯನವರು ಇನ್ನೂ ಮೆಚ್ಚಿಸಲು ಮಾಡಬಹುದಾದ ಘನಂದಾರಿ ಕೆಲಸಗಳು – ಮೈಸೂರಿನಲ್ಲಿ ಟಿಪ್ಪು ವಿಮಾನ ನಿಲ್ದಾಣ, ವಿಧಾನಸೌಧಕ್ಕೆ ಟಿಪ್ಪು ಸೌಧವೆಂದು ಮರು ನಾಮಕರಣ, ಮೈಸೂರು ವಿವಿಗೆ ಟಿಪ್ಪು ಹೆಸರು, ಟಿಪ್ಪುವಿನ 108 ಅಡಿ ಪ್ರತಿಮೆ, ಟಿಪ್ಪು ಮದ್ಯದ ಬಾಟಲಿ, ಬಿಎಂಟಿಸಿ/ಕೆಎಸ್ಆರ್ಟಿಸಿಗೆ ಟಿಪ್ಪು ಸಾರಿಗೆ ಎಂಬ ಹೆಸರು