ರಾಮನಗರ : ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಕುಂಬಳಗೂಡು ಬಳಿ ಗೃಹಸಚಿವ ಡಾ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ಸರ್ಕಾರದ ಕೆಲಸ.
ಯಾರಿಗೆ ಹೇಗೆ ಬೇಕೊ ಹಾಗೆ ಆರೋಪ ಮಾಡಿಕೊಳ್ಳಲಿ. ಮುನಿರತ್ನ ಅವರು ಕೇಳಿದರೆ ಅವರಿಗೂ ಅನುದಾನ ಕೊಡ್ತೇವೆ.
ಎಸ್.ಟಿ.ಸೋಮಶೇಖರ್ ಅವರು ನಮಗೆ ವಿಶೇಷ. ನಾವಿಬ್ಬರು ಸ್ನೇಹಿತರು, ಹಿಂದೆ ಒಂದೇ ಪಕ್ಷದಲ್ಲಿದ್ದೆವು.
ಅವರು ಹಿಂದೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು.
ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯ ಸಂಬಂಧವೇ ಬೇರೆ.ವೈಯಕ್ತಿಕವಾಗಿ ಎಸ್.ಟಿ.ಸೋಮಶೇಖರ್ ನನಗೆ ವಿಶೇಷ.ಅವರು ಪಕ್ಷಕ್ಕೆ ಬಂದರೆ ನಿಮಗೆ ಹೇಳಿಯೇ ಪಕ್ಷದ ಶಾಲು ಹಾಕುತ್ತವೆ.ಕುಂಬಳಗೂಡಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ ವಿಚಾರ.
ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ, ನಮ್ಮ ಸಿಎಂ ಇದ್ದಾರೆ. ನಾನು ಯಾರ ಬಗ್ಗೆಯು ಮಾತನಾಡೋಲ್ಲ.
ಬಿಜೆಪಿಗೆ ಆನೆಬಲ ಬಂದಿದೆಯೋ, ಒಂಟೆ ಬಂದಿದೆಯೋ ನಮಗೆ ಗೊತ್ತಿಲ್ಲ.
ನಾವ್ಯಾಕೆ ಬೇರೆ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಲಿ.
ಮೊದಲು ವಿಜೇಯೆಂದ್ರ ಅವರು ಅಧಿಕಾರ ಸ್ವೀಕರಿಸಲಿ ಅಮೇಲೆ ವಿಶ್ಲೇಷಣೆ ಮಾಡೊಣ.
ಗೌರಿ ಶಂಕರ್ ಅವರ ನಮ್ಮ ಪಕ್ಷಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ.
ಇದರಿಂದ ಪಕ್ಷಕ್ಕೆ ಲಾಭ ಇದೆ.
ಮುಂದಿನ ಚುನಾವಣೆಗೂ ಒಳ್ಳೆಯದು.
ಮತ್ತಷ್ಟು ಜನ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ.
ನಾವು ಸಿಎಂ ಆಗಲಿ ಎಂಬುವವರ ಬಗ್ಗೆ ಏನು ಮಾತನಾಡೋಲ್ಲ.ಮುಖ್ಯಮಂತ್ರಿ ಪದವಿ ಬಗ್ಗೆ ಎಲ್ಲಿಯು ಹೇಳಿಕೆ ನೀಡುವುದಿಲ್ಲ.ಅಂತಹ ಪ್ರಶ್ನೆಯನ್ನು ಕೇಳಬೇಡಿ.
ಕುಂಬಳಗೂಡಿನಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು