ಚಿಕ್ಕೋಡಿ : ಚಂದ್ರಯಾನ-3 ವಿರುದ್ಧ ಹಾಗೂ ಇಸ್ರೋ ವಿಜ್ಞಾನಿಗಳ ವಿರುದ್ಧ ವ್ಯಂಗ್ಯವಾಡಿದ್ದ ಬುದ್ಧಿ ಜೀವಿಗಳು ಹಾಗೂ ನಟ ಪ್ರಕಾಶ್ ರಾಜ್ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಚಂದ್ರಯಾನ-3 ಯಶಸ್ಸಿಗೆ ತಿರುಪತಿ ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳ ನಡೆಗೆ ವ್ಯಂಗ್ಯವಾಡಿದ ಬುದ್ಧಿ ಜೀವಿಗಳ ವಿರುದ್ಧ ಮುತಾಲಿಕ್ ಕಿಡಿಕಾರಿದ್ದಾರೆ.
ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಕ್ಕೆ ವ್ಯಂಗ್ಯವಾಡಿ ನಟ ಪ್ರಕಾಶ್ ರಾಜ್ ಕೆಟ್ಟದಾಗಿ ಮಾತನಾಡಿದ್ದರು. ಭಾರತ ಆಸ್ತಿಕರ ನಂಬಿಕೆ ಇರುವ ಧಾರ್ಮಿಕ ಸಂಪ್ರದಾಯದ ದೇಶ. ನಿಮ್ಮಂಥವರು ಇಲ್ಲಿ ಹುಟ್ಟುಬಾರದಿತ್ತು ಚೀನಾದಲ್ಲಿ ಹುಟ್ಟಬೇಕಿತ್ತು ಅಲ್ಲಿ ನಾಸ್ತಿಕರಿದ್ದಾರೆ. ವಿಜ್ಞಾನಿಗಳ ಸಾಧನೆ ಮಾಡಿದ್ದು ಪ್ರಕಾಶ್ ರಾಜ್ ಮುಖದ ಮೇಲೆ ಉಗುಳಿದ ಹಾಗೆ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ ಎಂದು ಕುಟುಕಿದ್ದಾರೆ
ವಿಜ್ಞಾನ ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು, ದೇಹ ಮತ್ತು ಹೃದಯ ಇದ್ದ ಹಾಗೆ. ಇಂಥ ದೇಶದಲ್ಲಿ ದೇಶದ ಸಾಧನೆಯನ್ನೂ ಟೀಕೆ ಮಾಡುವಂತಹ ನಿಮ್ಮಂತಹ ಬುದ್ಧಿ ಜೀವಿಗಳು ಹುಟ್ಟಿದ್ದು ದೊಡ್ಡ ಕಳಂಕ, ಇಡೀ ಜಗತ್ತೇ ಹೆಮ್ಮೆ ಪಡುವ ವಿಜ್ಞಾನಿಗಳು ತಿರುಪತಿಗೆ ಹೋಗಿ ಬಂದ ಕಾರಣದಿಂದಲೇ ಸಾಧನೆ ಸಾಧ್ಯವಾಗಿದೆ. ವಿಜ್ಞಾನದಲ್ಲಿ ಸಿಗುವ ಫಲ ದೇವರ ಮೇಲೆ ಬಿಟ್ಟಿದ್ದು ಎಂಬುದನ್ನು ಬುದ್ಧಿಜೀವಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.