ಲಕ್ನೋ : ಜ್ಞಾನವಾಪಿ ಮಸೀದಿ ಮಸೀದಿಯಾಗಿದ್ದರೇ ಅದರ ಆವರಣದಲ್ಲಿ ತ್ರಿಶೂಲ ಏನು ಮಾಡುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಮುಸ್ಲಿಂ ಅರ್ಜಿದಾರರು ಒಂದು ನಿರ್ಣಯಕ್ಕೆ ಮುಂದಾಗಬೇಕು. ಸರ್ಕಾರವು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತದೆ ಎಂದರು.
ನಾವು ಅದನ್ನು ಮಸೀದಿ ಎಂದು ಕರೆದರೆ ಅದು ಸಮಸ್ಯೆಯಾಗುತ್ತದೆ. ಹಾಗಿದ್ದರೆ ಮಸೀದಿಯಲ್ಲಿ ತ್ರಿಶೂಲ ಏನು ಮಾಡುತ್ತಿದೆ? ತ್ರಿಶೂಲವನ್ನು ನಾವು ಇಟ್ಟಿಲ್ಲ. ಮಸೀದಿಯ ಪಕ್ಕದಲ್ಲಿ ಜ್ಯೋತಿರ್ಲಿಂಗವಿದೆ, ದೇವತೆಗಳಿದ್ದಾರೆ. ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲು ಮುಸ್ಲಿಂ ಕಡೆಯಿಂದ ಪ್ರಸ್ತಾವನೆ ಬರಬೇಕು ಎಂದು ನಾನು ಭಾವಿಸುತ್ತೇನೆ ಎಂದರು
ಜ್ಞಾನವಾಪಿ ಮಸೀದಿ ಸರ್ವೆಗೆ ವಾರಣಾಸಿ ಜಿಲ್ಲಾ ನ್ಯಾಯಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್ ಅಗಸ್ಟ್ 3ಕ್ಕೆ ಆದೇಶ ಕಾಯ್ದಿರಿಸಿದೆ