ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಸಾಧಕರ ಸಾಧನೆಯ ಬಗ್ಗೆ ಅದ್ಭುತವಾಗಿ ತೋರಿಸಲಾಗುತ್ತಿದೆ. ಇದೀಗ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೆಂಪು ಕುರ್ಚಿ ಎರುತ್ತಿದ್ದಾರೆ. ರಾಜಕೀಯ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.
ರಮೇಶ್ ಅರವಿಂದ್ ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್‌ನ ಅಲಂಕರಿಸಿದ್ದಾರೆ. ಸದ್ಯ ಡಿಕೆಶಿ ಅವರು ಪಾಲ್ಗೊಂಡಿರುವ ವಾಹಿನಿ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ ಭಾಗಿಯಾಗಿದ್ದರು. ಇದೀಗ ಡಿಕೆಶಿ ಕೆಂಪು ಖುರ್ಚಿ ಏರುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.
ಈ ವಾರಾಂತ್ಯ ಡಿಕೆಶಿ ಅವರ ಎಪಿಸೋಡ್ ಚಿತ್ರೀಕರಣ ಮಾಡಲಾಗಿತ್ತು. ಅದರಂತೆ ವಾರಾಂತ್ಯ ಜೂನ್ 10 ಮತ್ತು 11ರ ರಾತ್ರಿ 9ಕ್ಕೆ ಡಿಕೆಶಿ ಅವರ ಎಪಿಸೋಡ್ ಪ್ರಸಾರವಾಗಲಿದೆ. ಒಟ್ನಲ್ಲಿ ಡಿಕೆಶಿ ಅವರ ರಾಜಕೀಯ ಸಾಧನೆಯ ಕಥೆ ಕೇಳೋದ್ದಕ್ಕೆ ಡಿಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.