ಬೆಂಗಳೂರು: ಇಂದು ವಿಶ್ವ ಪರಿಸರ ದಿನಾಚರಣೆ ಯಾಗಿದ್ದು, ಅರಣ್ಯಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಥಣಿಸಂದ್ರ ರಾಚೇನಹಳ್ಳಿಗೆ ಕೆರೆ ಬಳಿ ಬಿಬಿಎಂಪಿಯಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಾಲಿಕೆ ಅಧಿಕಾರಿಗಳು ಪಾರ್ಕ್ ಮಧ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಡಿಕೆಶಿ, ಬಿಬಿಎಂಪಿ ಮಹಿಳಾ ಅಧಿಕಾರಿಗೆ ಬೈದರು.
ಕಾಮನ್ ಸೆನ್ಸ್ ಇರಬೇಕು ಎಲ್ಲಿ ಗಿಡ ನಡಬೇಕು ಅಂತ ಹೇಳಿದರು. ಪಾರ್ಕ್ ನಲ್ಲಿ ಗಿಡ ನಡುವ ಕಾರ್ಯಕ್ರಮ ಮಾಡಿದ್ದಕ್ಕೆ ಡಿಕೆಶಿ ಬಳಿಕ ನಡೆದ ತಮ್ಮ ಭಾಷಣದಲ್ಲೂ ಅಸಮಧಾನ ವ್ಯಕ್ತಪಡಿಸಿದರು.