ಮೈಸೂರು : ಮುಂದಿನ ವರ್ಷ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ಪಕ್ಷ ಕರ್ನಾಟಕವನ್ನೇ ತನ್ನ ದಾಳವನ್ನಾಗಿ ಮಾಡಿಕೊಳಲ್ಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಬಿಜೆಪಿಗೆ ಟಕ್ಕರ್ ಕೊಡಲು ಪ್ಲಾನ್ ಮಾಡಿರುವ ಕಾಂಗ್ರೆಸ್ ಬಾಯಿ ಬಿಟ್ಟರೆ ಗುಜರಾತ್ ಮಾಡೆಲ್ ಯುಪಿ ಮಾಡೆಲ್ ಎನ್ನುತ್ತಿದ್ದ ಬಿಜೆಪಿಗೆ ಕರ್ನಾಟಕ ಮಾಡೆಲ್ ಮೂಲಕ ತಿರುಗೇಟು ಕೊಡಲು ಅಸ್ತ್ರವೊಂದನ್ನು ಸಿದ್ಧಪಡಿಸಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕೊಟ್ಟಿರುವ ಗ್ಯಾರೆಂಟಿಯನ್ನು ಲೋಕ ಸಭಾ ಚುನಾವಣೆಯಲ್ಲಿ ಅಳವಡಿಸಿಕೊಂಡು ದೇಶದೆಲ್ಲೆಡೆ ಅದನ್ನೇ ಬಿಜೆಪಿಯ ವಿರುದ್ಧ ಪ್ರಯೋಗಿಸಲು ಮುಂದಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಬೃಹತ್ ಸಭೆ ಮಾಡಿ ಗ್ಯಾರೆಂಟಿ ಘೋಷನೆ ಮಾಡಲು ಕೈ ಪಾಳಯ ಪ್ಲಾನ್ ಮಾಡಿದ್ದು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಉಪಸ್ಥಿತಿಯಲ್ಲಿ ಬೃಹತ್ ಸಭೆ ನಡೆಸಿ ಗ್ಯಾರೆಂಟಿ ಘೋಷಣೆ ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.
ನಾಳೆ ಬಹುತೇಕ ಗ್ಯಾರೆಂಟಿ ಯೋಜನೆಯ ರೂಪುರೇಷೆ ಸಿದ್ದಪಡಿಸಿ ಸಾಂಕೇತಿಕವಾಗಿ ಸಿಎಂ ಸಿದ್ದರಾಮಯ್ಯ ಜನರಿಗೆ ಬಂಪರ್ ಕೊಡುಗೆ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ. ವಿಪಕ್ಷ ನಾಯಕನ ಹುಡುಕಾಟದಲ್ಲಿರುವ ಬಿಜೆಪಿಗೆ ಕಾಂಗ್ರೆಸ್ ಮತ್ತೊಂದು ಮಾರ್ಮಘಾತ ನೀಡುವ ಎಲ್ಲಾ ಸೂಚನೆಗಳು ಗೋಚರಿಸುತ್ತಿದೆ. ಇತ್ತ ಕಾಂಗ್ರೆಸ್ ಅಸ್ತ್ರಕ್ಕೆ ಬಿಜೆಪಿ ಯಾವ ಅಸ್ತ್ರ ಪ್ರಯೋಗಿಸುತ್ತೂ ಕಾದು ನೋಡಬೇಕಿದೆ.