ಮೈಸೂರು : ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪಗೆ ಸನ್ಮಾನ ಅಭಿನಂದನೆ ಸಲ್ಲಿಕೆ.
ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೈಸೂರಿಗೆ ಆಗಮಿಸಿದ ಸಚಿವ ಮಹದೇವಪ್ಪಗೆ ಬೆಂಬಲಿಗರು, ಹಿಥೈಷಿಗಳಿಂದ ಸನ್ಮಾನ ಅಭಿನಂದನೆ ಸಲ್ಲಿಕೆ.
ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹಕ್ಕೆ ಆಗಮಿಸಿದ ಸಚಿವ ಮಹದೇವಪ್ಪಗೆ ಹೂಗುಚ್ಚ ನೀಡಿ, ಶಾಲು ಹೊದಿಸಿ, ಪೇಟ ತೊಡಿಸಿ, ಹೂವಿನ ಹಾರಗಳನ್ನು ಸಮರ್ಪಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಕೆ.
ಇದೇ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದ ಸಚಿವ ಮಹದೇವಪ್ಪ.
ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವ ಭರವಸೆ ನೀಡಿದ ಸಚಿವ ಮಹದೇವಪ್ಪ.