ಸಿಎಂ ಆದ ಬಳಿಕ ಗಡ್ಡಕ್ಕೆ ಮುಕ್ತಿ ಕೊಡುತ್ತೇನೆ ಎಂದಿದ್ದ ಡಿಕೆ ಶಿವಕುಮಾರ್ ಕೊನೆಗೂ ನೆರವೇರಿಲ್ಲ.
ಶನಿವಾರ ಮಧ್ಯಾಹ್ನ 12:30ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿ ಜಾರಿ ನಿರ್ದೇಶನಾಲಯ ಡಿಕೆಯನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿತ್ತು.
ಡಿಕೆಶಿ ಅವರು ತಿಹಾರ್ ಜೈಲಿನಲ್ಲಿದ್ದಾಗ ಸಿಎಂ ಆದ ಬಳಿಕ ಗಡ್ಡ ತೆಗೆಯುವ ಶಪಥ ಮಾಡಿದ್ದರು. ಆದರೆ ಇಲ್ಲಿಯವರೆಗೂ ಗಡ್ಡವನ್ನು ತೆಗೆಯಲೇ ಇಲ್ಲ. ಅದರ ಬದಲಿಗೆ ಸ್ವಲ್ಪ ಟ್ರಿಮ್ ಮಾಡಿಸಿ ಚಿಕ್ಕದಾಗಿಸಿದ್ದಾರೆ.
ಡಿಸಿಎಂ ಸ್ಥಾನ ಸಿಕ್ಕಿರುವುದಕ್ಕೆ ಗಡ್ಡಕ್ಕೆ ಟ್ರಿಮ್ ಮಾಡಿಸಿರುವ ಡಿಕೆಶಿ ಸಿಎಂ ಪಟ್ಟಕ್ಕೇರಿದ ಮೇಲೆ ತಮ್ಮ ಗಡ್ಡಕ್ಕೆ ಮುಕ್ತಿಯನ್ನು ನೀಡುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.