ರಾಜ್ಯ ವಿಧಾನ ಸಭೆ ಚುನಾವಣೆ ವೋಟಿಂಗ್ ಮುಗಿದಿದ್ದು, ಎಲ್ಲಾ ಸರ್ವೇಗಳು ಕೂಡ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಬಹುತೇಕ ಸರ್ವೇಗಳು ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆಯನ್ನು ಕೊಟ್ಟಿದ್ದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರಿಲ್ಯಾಕ್ಸ್ ಆಗಿದ್ದಾರೆ
ಚುನಾವಣೆಗೂ ಮುನ್ನ ಅತಂತ್ರ ಫಲತಾಂಶದ ಸೂಚನೆ ನೀಡಿತ್ತು, ವೋಟಿಂಗ್ ನಂತರ ನಡೆದ ಎಕ್ಸ್ಸಿಟ್ಸ್ ಪೋಲ್ ಸರ್ವೇ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಬರುತ್ತದೆ ಎಂದು ಹೇಳಿವೆ. ಸೇವೆಗಳ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ ಬಿಜೆಪಿ ಸ್ಪಷ್ಟ ಬಹುಮತ ಬರುತ್ತದೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ 130 ಕ್ಕೂ ಅಧಿಕ ಸ್ಥಾನ ಸಿಗಲಿದೆ. ಯಾವುದೇ ಸಮ್ಮಿಶ್ರ ಸರ್ಕಾರ ಕೂಡ ಬರಲ್ಲ ನಾವು ಸರ್ಕಾರ ರಚನೆ ಮಾಡುವುದು ಖಚಿತ ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿ ನಮ್ಮ 140 ಸೀಟುಗಳನ್ನ ತೆಗೆದುಕೊಳ್ಳುತ್ತದೆ. ನಾವು 13 ತಾರೀಖು ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಬಿಜೆಪಿ 62 ಸ್ಥಾನಗಳಿಗೆ ಕುಸಿಯುವುದು ಸತ್ಯ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.
ದುಡ್ಡಿನ ಕೊರತೆಯಿಂದ ನಾವು 30 ಸ್ಥಾನ ಕಳೆದುಕೊಳ್ಳುವುದು ಪಕ್ಕ, ಆದರೂ ಜನರು ನಮ್ಮ ಪರವಿದ್ದಾರೆ ನಾವು ಕೂಡ ಸರ್ಕಾರ ಮಾಡುತ್ತೇವೆ ಎಂದು ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಚಾಟಿ ಬೀಸಿದ್ದಾರೆ. ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ನಮ್ಮ ರಾಜ್ಯಧರ್ಮ ನ್ಯೂಸ್ ವರದಿಯ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ 105, ಬಿಜೆಪಿಗೆ 89, ಜೆಡಿಎಸ್ ಪಕ್ಷಕ್ಕೆ 26, ಇತರೆ 04 ಸ್ಥಾನ ಬರುವ ಸಾಧ್ಯತೆಯಿದೆ