ಚುನಾವಣಾ ಆಯೋಗದ ಪ್ರಕಾರ, ಕರ್ನಾಟಕದಲ್ಲಿ 17 ವರ್ಷಕ್ಕಿಂತ ಮೇಲ್ಪಟ್ಟ 1.25 ಲಕ್ಷಕ್ಕೂ ಹೆಚ್ಚು ಜನರು ಈ ಬಾರಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 41,000 ಅರ್ಜಿದಾರರು ಏಪ್ರಿಲ್ 1ಕ್ಕೆ 18 ವರ್ಷಕ್ಕೆ ಕಾಲಿಟ್ಟಿದ್ದು, ಇವರು ಈ ಬಾರಿ ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿದೆ.
ಸೋಮವಾರ, ಮೇ 1 ರಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದ ಚುನಾವಣಾ ವ್ಯವಸ್ಥೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 5,21,73,579 ಕೋಟಿ ಮತದಾರರಿದ್ದಾರೆ. ಅವರಲ್ಲಿ 2.62 ಕೋಟಿ ಪುರುಷರು ಮತ್ತು 2.59 ಕೋಟಿ ಮಹಿಳೆಯರು.
ತೃತೀಯ ಲಿಂಗಿ 4,669, ಶತಾಯುಷಿ 16,976, 80 ವರ್ಷ ಮೇಲ್ಪಟ್ಟವರು 12,15,763, ವಿಶೇಷ ಚೇತನರು 5,55,073, ಸೇವಾ 47,779 ಮತ್ತು 9,17,241 ಮೊದಲ ಬಾರಿಯ ಮತದಾನ ಮಾಡಲು ಅರ್ಹರಾಗಿದ್ದಾರೆ
ರಾಜ್ಯಾದ್ಯಂತ ಒಟ್ಟು 58,282 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಎಲ್ಲಾ ರಾಜಕೀಯ ಪಕ್ಷಗಳ ಗುರಿಯಾಗಿರುವ ಒಂದು ವರ್ಗದ ಮತದಾರರಿದ್ದಾರೆ, ಅದು ‘ಮೊದಲ ಬಾರಿಗೆ ಮತ ಚಲಾಯಿಸುವವರು’ ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲೂ ಯುವ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದು ವಿಶೇಷ