– ರಾಜಕೀಯದಲ್ಲಿ ರಾಣಿಯರು
ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಬೌಧಿಕವಾಗಿ, ರಾಜಕೀಯ ಹಾಗೂ ಇನ್ನಿತರ ಹಲವಾರು ಕ್ಷೇತಗಳಲ್ಲಿ ಪುರುಷರಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ,ನಮ್ಮದು ಮಹಿಳಾ ಸಬಲೀಕರಣ ರಾಷ್ಟ್ರ ಎಂದು ಅನೇಕರು ನಿರೂಪಿಸಿದ್ದಾರೆ.
2018-19 ರ ರಾಷ್ಟ- ರಾಜ್ಯ ಚುನಾವಣೆಗಳಲ್ಲಿ ಹೋರಾಡಿ ಗೆದ್ದು ನಮ್ಮನ್ನು ಆಳುತ್ತಿರುವ ಹೆಮ್ಮೆಯ ಮಹಿಳಾ ರಾಜಕಾರಣಿಗಳ ಕಿರು ನೋಟ ಇಲ್ಲಿದೆ.

ನಿರ್ಮಲ ಸೀತಾರಾಮನ್ -ಇವರು 2018 ರಲ್ಲಿ ರಾಜಕೀಯ ಪ್ರವೇಶ ಮಾಡಿ,2014 ರಲ್ಲಿ ರಕ್ಷಣಾ ಸಚಿವೆಯಾಗಿ, ಈ ಹುದ್ದೆ ನಿಭಾಯಿಸಿದ 2 ನೇ ಮಹಿಳೆ ಎಂಬ ಖ್ಯಾತಿಗೆ ಭಾಜನರಗಿ,2019 ರ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಪೂರ್ಣಪ್ರಮಾಣದ ಹಣಕಾಸು ಸಚಿವೆಯಾಗಿ ಕಾರ್ಯನಿರ್ವಾಯಿಸುತ್ತಿದ್ದಾರೆ.
ಸೋನಿಯಾ ಗಾಂಧಿ
2004-2014 ರ ತನಕ ಇವರು ಭಾರತ ಅತೀ ಪ್ರಭಾವ ಶಾಲಿ ರಾಜಜಕಾರಣಿ,ಸದ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ

ಶೋಭಾ ಕರಂದ್ಲಾಜೆ
ಇವರು ಕರ್ನಾಟಕದಿಂದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಹೆಮ್ಮೆಯ ಸಂಸದೆ

ಮಮತಾ ಬ್ಯಾನರ್ಜಿ
ಇವರು ಪಶ್ಚಿಮ ಬಂಗಾಳದ 8 ನೇ ಪ್ರಸ್ತುತ ಮುಖ್ಯಮಂತ್ರಿಯಾಗಿ ಪ್ರಭಲ ರಾಜಕಾರಣಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಲಲಿತಾ ಬಿಟ್ಟರೆ ಅತ್ಯಂತ ಪ್ರಭಾವಿ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ

ಸ್ಮೃತಿ ಇರಾನಿ
ಇವರು ಭಾರತದ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಲೋಕಸಭೆಯಲ್ಲಿ ತಮ್ಮ ಅಬ್ಬರದ ಭಾಷಣಕ್ಕೆ ಹೆಸರುವಾಸಿ. ಮೋದಿ ಸಂಪುಟದ ಪ್ರಭಾವಿ ಸಚಿವೆ

ಸುಮಲತಾ ಅಂಬರೀಶ್
ಇವರು 2019 ರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆದ್ದು ಸಂಸದೆಯಾಗಿ ಗೆದ್ದು ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿಯಾ ಎಂದರೆ ಮಂಡ್ಯ, ಮಂಡ್ಯ ಎಂದರೆ ಇಂಡಿಯಾ ಎಂಬಂತೆ 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ದೇಶದ ಕೇಂದ್ರ ಬಿಂದುವಾಗಿದ್ದರು
