ಬೆಂಗಳೂರು: ಅಭಿನಯ ಚಕ್ರವರ್ತಿ ಕನ್ನಡ ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಕಿಚ್ಚ ಸುದೀಪ್ ನಾಳೆ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
ನಾಳೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದೀಪ್ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಒಂದು ವೇಳೆ ಸುದೀಪ್ ನಾಳೆ ಪಕ್ಷ ಸೇರದೆ ಇದ್ದಿದ್ದೇ ಆದರೆ ಬಾಹ್ಯವಾಗಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ನಾಳೆಯಿಂದಲೇ ತೊಡಗಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಸುದೀಪ್ ಸೇರ್ಪಡೆಯಿಂದ ಬಿಜೆಪಿಗೆ ಪ್ಲಸ್ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಹೊಸ ಹುರುಪು ಬರುತ್ತದೆ. ಅಲ್ಲದೆ ಕೆಲ ಡ್ಯಾಮೇಜ್ ಕಂಟ್ರೋಲ್ ಕೂಡ ಬಿಜೆಪಿಗೆ ಆಗಲಿದೆ. ನಾಯಕ ಸಮುದಾಯದ ಯುವ ನಾಯಕನಾಗಿ ಸುದೀಪ್ ಯುವ ಮತಗಳನ್ನು ಸೇಳೆಯಬಲ್ಲರು ಅಲ್ಲದೆ ಕೋಟ್ಯಂತರ ಅವರ ಅಭಿಮಾನಿಗಳು ಬಿಜೆಪಿ ಬೆಂಬಲಿಸಬಹುದು ಎಂಬುದು ಹೈಕಮಾಂಡ್ ಲೆಕ್ಕಾಚಾರ.
ಪಕ್ಷಕ್ಕೆ ಸುದೀಪ್ ಸೇರ್ಪಡೆ ಖಚಿತವಾದರೆ ಅವರನ್ನು ಎಂ.ಎಲ್.ಸಿ ಮಾಡಿ ಮಂತ್ರಿ ಮಾಡುವ ಸಾದ್ಯತೆ ಕೂಡ ಇದೆ. ಇದರೊಂದಿಗೆ ಬಿಜೆಪಿ ಯುವ ಹಾಗೂ ಡೈನಮಿಕ್ ನಾಯಕರುಗಳನ್ನು ತನ್ನತ್ತ ಆಕರ್ಷಿಸಿ ಪಕ್ಷವನ್ನು ಬಲಗೊಳಿಸಲು ಪ್ಲಾನ್ ರೂಪಿಸಿದೆ ಎಂದು ಹೇಳಲಾಗುತ್ತಿದೆ