ಕನ್ನಡ ಚಿತ್ರರಂಗದ ನಟ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಕನ್ನಡ ಮಾಧ್ಯಮಗಳ ನಡುವಿನ ತಿಕ್ಕಾಟಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಾದ್ಯಮದ ಕ್ಷೇಮೆ ಕೋರಿದ ದರ್ಶನ್ ಪತ್ರವೊಂದು ಎಲ್ಲಾ ಕಡೆ ಹರಿದಾಡುತ್ತಿದೆ.
ಈ ಹಿಂದೆ ಮಾಧ್ಯಮಗಳ ಬಗ್ಗೆ ಹೀನಾಯವಾಗಿ ಬೈದಿದ್ದ ನಟ ದರ್ಶನ್ ಇದೀಗ ಯಾವುದೇ ಅಚಾತುರ್ಯದಿಂದ ಅ ದಿನ ನಾನು ತಪ್ಪಾಗಿ ಮಾತನಾಡಿದ್ದೇನೆ, ಇರುವವರೆಗೂ ನಗುತ್ತಾ ಇರೋಣ ಎಂದು ಮನವಿ ಮಾಡಿದ್ದಾರೆ. ಮಾಧ್ಯಮಗಳ ಕಚೇರಿಗೆ ದರ್ಶನ್ ಹೆಸರಿನಲ್ಲಿ ಈ ಪತ್ರ ರವಾನೆಯಾಗಿದೆ.
ಏನಿದು ಪ್ರಕರಣ ?
ಈ ಹಿಂದೆ ನಟ ದರ್ಶನ್ ಹಾಗೂ ಮಾದ್ಯಮದ ನಡುವೆ ಕಂದಕ ಏರ್ಪಟಿತ್ತು, ದರ್ಶನ್ ಬೈದಿದ್ದಾರೆ ಎನ್ನಲಾದ ಒಂದು ಆಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು, ಇದನ್ನು ಮನಗಂಡ ಪತ್ರಕರ್ತರ ಯೂನಿಯನ್ ದರ್ಶನ್ ಕುರಿತಾಗಿ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂಬ ತೀರ್ಮಾನಕ್ಕೆ ಬಂದಿತ್ತು, ಇದಕ್ಕೆ ಪೂರಕ ಎಂಬಂತೆ ಕೂಡ ಮಾಧ್ಯಮದಿಂದ ದೂರವಿದ್ದು ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಪ್ರಮೋಶನ್ ಮಾಡುತ್ತಿದ್ದರು.
ಇದೀಗ ಮಾಧ್ಯಮದ ಕ್ಷೇಮೇ ಕೇಳಿ ದರ್ಶನ್ ಬರೆದಿರುವ ಪತ್ರಕ್ಕೆ ಯಾವ ರೀತಿ ಪತ್ರಕರ್ತರು ಸ್ಪಂದಿಸುತ್ತಾರೆ ಎಂಬುದು ಇದೀಗ ದರ್ಶನ್ ಅಭಿಮಾನಿಗಳು ಹಾಗೂ ಮಾಧ್ಯಮದವರ ಮುಂದಿರುವ ಪ್ರಶ್ನೆಯಾಗಿದೆ.